ನೂರಕ್ಕೆ ನೂರರಷ್ಟು ಫಲಿತಾಂಶ ನೀಡುವ ಮೂಲಕ ಗೌರವ ಸಲ್ಲಿಸಿ- ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಎಸ್. ಎ ರಾಮದಾಸ್ ಕರೆ..

ಮೈಸೂರು,ಡಿ,11,2019(www.justkannada.in):  ಮೈಸೂರಿನ  ಡಿ ಬನುಮಯ್ಯ ವಿದ್ಯಾಸಂಸ್ಥೆಗೆ ಶತಮಾನೋತ್ಸವದ ಸಂಭ್ರಮವಾಗಿದ್ದು, ಅದ್ಧೂರಿಯಾಗಿ ಶತಮಾನೋತ್ಸವ ಸಂಭ್ರಮಾಚರಣೆ ಮಾಡಲಾಯಿತು.

ನಗರದ ಬನುಮಯ್ಯ ಕಾಲೇಜ್ ಆವರಣದಲ್ಲಿ ಇರುವ ಬನುಮಯ್ಯ ಅವರ ಪುತ್ಥಳಿಗೆ ಕುಂಚಿಟಿಗ ಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮೀಗಳು ,ಶಾಸಕ ಎಸ್ ಎ ರಾಮದಾಸ್ ಮಾಲಾರ್ಪಣೆ ಮಾಡಿದರು. ಬಳಿಕ ಹಲವು ಗಣ್ಯರು ದೀಪ ಬೆಳಗಿಸುವುದರ ಮೂಲಕ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ. ಟಿ ದೇವೇಗೌಡ, ಎಲ್ ನಾಗೇಂದ್ರ ಮೇಯರ್ ಪುಷ್ಪಲತಾ ಜಗನ್ನಾಥ, ಬನುಮಯ್ಯ ಸಂಸ್ಥೆಯ ಅಧ್ಯಕ್ಷ ಡಾ.ವಿ.ಬಿ.ಜಯದೇವ ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಎಸ್.ಎ ರಾಮದಾಸ್,  ನನ್ನ ನಿಜವಾದ ರಾಜಕಾರಣ ಆರಂಭ ಆಗಿದ್ದು ಬನುಮಯ್ಯ ಕಾಲೇಜು ಆವರಣದಿಂದ. ಜೀವನ ಪಡೆದುಕೊಂಡದ್ದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕರ್ನಾಟಕದಲ್ಲಿ ಕಾಮರ್ಸ್ ಕಾಲೇಜ್ ಅಂದರೇ ಬನುಮಯ್ಯ ಕಾಲೇಜು ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಹಳ ಜನ ಅರ್ಥಶಾಸ್ತ್ರಜ್ಞರು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಈ ಕಾಲೇಜಿಗೆ ತನ್ನದೆ ಆದ ಇತಿಹಾಸ ಇದೆ. ಈ ಸಂದರ್ಭದಲ್ಲಿ ಉತ್ತಮ ಫಲಿತಾಂಶ ಕೊಡೊ ಅವಶ್ಯಕತೆ ಇದೆ. ಮುಂದಿನ ದಿನ ನೂರನೇ ವರ್ಷದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುವ ಮೂಲಕ ಡಿ. ಬನುಮಯ್ಯ ಆವರಿಗೆ ಗೌರವ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಶಾಸಕ ಎಸ್ ಎ ರಾಮದಾಸ್ ಕರೆ ನೀಡಿದರು.

Key words: 100th Anniversary -Celebration –mysore- D Banumaya Vidyalaya-MLA-SA ramadas