ಚಿತ್ರ ಮಂದಿರ, ಈಜುಕೊಳ, ಜಿಮ್ ಗಳಲ್ಲಿ ನಾಳೆಯಿಂದಲೇ ಶೇ.100 ಜನರಿಗೆ ಅವಕಾಶ – ಸಚಿವ ಸುಧಾಕರ್

ಬೆಂಗಳೂರು,ಫೆಬ್ರವರಿ,4,2022(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೋವಿಡ್ ನಿಯಮಗಳನ್ನ ಸಡಿಲಗೊಳಿಸುತಿದ್ದು ಇದೀಗ ಚಿತ್ರ ಮಂದಿರ, ಈಜುಕೊಳ, ಜಿಮ್ ನಾಳೆಯಿಂದಲೇ ಶೇ.100 ಜನರಿಗೆ ಅವಕಾಶ  ನೀಡಿದೆ.

ಸಿಎಂ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ  ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಶನಿವಾರದಿಂದಲೇ ಶೇ.100 ಸೀಟುಗಳ ಭರ್ತಿಗೆ ಅನುಮತಿ ನೀಡಿದೆ.

ಸಭೆ ನಂತರ  ಮಾಧ್ಯಮಗಳ ಜತೆ ಮಾತನಾಡಿದ  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಯೋಗ ಕೇಂದ್ರ, ಈಜುಗೊಳ, ಜಿಮ್ ಸೆಂಟರ್​ಗಳಲ್ಲಿ ನಾಳೆಯಿಂದಲೇ ಶೇ 100 ಪ್ರೇಕ್ಷಕರಿಗೆ ಅವಕಾಶ  ನೀಡಲಾಗುತ್ತದೆ. ಭರ್ತಿಗೂ ಒಪ್ಪಿಗೆ ನೀಡಿದ್ದು, ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ ಎಂದರು.

ಚಿತ್ರಮಂದಿರಗಳ ಒಳಗೆ ಪ್ರೇಕ್ಷಕರು ಯಾವುದೇ ತಿಂಡಿ, ತಿನಿಸು ಪದಾರ್ಥ ಕೊಂಡೊಯ್ಯುವಂತಿಲ್ಲ. ಮಾಸ್ಕ್ ಧರಿಸುವುದು‌ ಕಡ್ಡಾಯ. ಈ ಸಂಬಂಧ ವಿಸ್ತೃತ ಮಾರ್ಗಸೂಚಿಯನ್ನು ಇಂದು ಪ್ರಕಟಿಸಲಾಗುತ್ತೆ. ಸಿನಿಮಾ ಟಾಕೀಸ್, ಜಿಮ್, ಈಜುಕೊಳ ಮಾಲೀಕರು ಈ ನಿಯಮಗಳ ಪಾಲನೆ, ನಿಗಾ ಎರಡನ್ನೂ ಮಾಡಬೇಕು. ಇಲಾಖೆ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ತಪಾಸಣೆ ಮಾಡಲಿದ್ದಾರೆ ಎಂದು ಡಾ.ಸುಧಾಕರ್ ತಿಳಿಸಿದರು.

ರಾಜ್ಯ ಸರ್ಕಾರ ನಿಯಮ ಪಾಲಿಸಬೇಕು. ಎರಡು ಡೋಸ್ ಲಸಿಕೆ ಪಡೆದಿರಬೇಕು.   ಎಲ್ಲಾ ನಿರ್ಬಂಧಗಳನ್ನ ಹಿಂಪಡೆಯಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: 100 percent -people – allowed – theatres- Minister -Sudhakar