ದಿನೇ ದಿನೇ ಅದೋಗತಿಗೆ ಬಿಜೆಪಿ: 10 ರಿಂದ 30 ಜನ ಕಾಂಗ್ರೆಸ್ ಸೇರ್ಪಡೆಯಾಗಬಹುದು- ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಹುಬ್ಬಳ್ಳಿ,ಆಗಸ್ಟ್,28,2023(www.justkannada.in):  ದಿನೇ ದಿನೇ ಬಿಜೆಪಿ ಅದೋಗತಿಗೆ ತಲುಪುತ್ತಿದ್ದು, ಬಿಜೆಪಿಯಿಂದ 10 ರಿಂದ 30 ಜನ ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್,  ಬಿಜೆಪಿ ಕೆಲ ನಾಯಕರು ಕಾಂಗ್ರೆಸ್ ಸೇರ್ತಾರೆ. ಕಾಂಗ್ರೆಸ್ ಗೆ 10 ರಿಂದ 30 ಜನ ಬರಬಹುದು. ಆದರೆ ಯಾರ ಹೆಸರು ಹೇಳೋಕೆ ಆಗಲ್ಲ.  ಬಿಜೆಪಿಯ ಹಲವಾರು ನಾಯಕರು ಕರೆ ಮಾಡುತ್ತಿದ್ದಾರೆ. ತಳ ಮಟ್ಟದ ಕಾರ್ಯಕರ್ತರು ಕರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ  ಬರೋರ ಹೆಸರು ಹೇಳಿದ್ರೆ ಅವರಿಗೆ ತೊಂದರೆಯಾಗುತ್ತೆ. ಸಮಯ ಬಂದಾಗ ಹೇಳುತ್ತೇನೆ ಎಂದರು.

Key words:  10 to 30 people – join- Congress- Former CM -Jagdish Shettar.