Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಕಬಿನಿಯಿಂದ 1 ಲಕ್ಷ ಕ್ಯೂಸೆಕ್ ನೀರು  ಬಿಡುಗಡೆ ಹಿನ್ನೆಲೆ: ನಂಜನಗೂಡು- ಊಟಿ ಸಂಚಾರ ಸ್ಥಗಿತ…

ಕಬಿನಿಯಿಂದ 1 ಲಕ್ಷ ಕ್ಯೂಸೆಕ್ ನೀರು  ಬಿಡುಗಡೆ ಹಿನ್ನೆಲೆ: ನಂಜನಗೂಡು- ಊಟಿ ಸಂಚಾರ ಸ್ಥಗಿತ…

ಮೈಸೂರು,ಆ,9,2019(www.justkannada.in):  ಕಬಿನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆ ನಂಜನಗೂಡು- ಊಟಿ ಸಂಚಾರ ಸ್ಥಗಿತವಾಗಿದೆ.

ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು ಈ ಹಿನ್ನೆಲೆ ನಂಜನಗೂಡಿನ ಮಲ್ಲನಮೂಲೆ ಬಳಿ  ರಾಷ್ಟ್ರೀಯ ಹೆದ್ದಾರಿ 266ರಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ನಂಜನಗೂಡು- ಊಟಿ ರಸ್ತೆ ಸಂಚಾರ ಬಂದ್ ಆಗಿದೆ.

ಇನ್ನು ರಸ್ತೆ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಭದ್ರತೆ ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿದ್ದಾರೆ.  ಉತ್ತರಕರ್ನಾಟಕದ ಹಲವು ಜಿಲ್ಲೆಗಳ ಗ್ರಾಮಗಳು ಪ್ರವಾಹದಿಂದಾಗಿ ಮುಳುಗಿ ಹೋಗಿವೆ. ಇಲ್ಲಿನ ಜನರನ್ನ ಸುರಕ್ಷಿತ ಸ್ಥಳದತ್ತ ರವಾನಿಸುವ ಕಾರ್ಯ ನಡೆಯುತ್ತಿದೆ.

Key words: 1 lakh- cusec -water -release –Kabini- Nanjangud – Ooty- traffic- breakdown