ಶ್ರೀರಂಗಪಟ್ಟಣ ಬಳಿಯ ಜಾಮೀಯಾ ಮಸೀದಿ ಒಡೆದು ಹಾಕುತ್ತೇವೆ ಎಂಬ ಬೆದರಿಕೆ ಇದೆ – ಎಸ್.ಡಿ.ಪಿ.ಐ ಸಂಘಟನೆ ಆರೋಪ.

ಮೈಸೂರು,ಡಿಸೆಂಬರ್,11,2021(www.justkannada.in): ಮೈಸೂರು ಹಿಂದೂ ಜಾಗರಣಾ  ವೇದಿಕೆಯು ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ ಎಂದು ಎಸ್.ಡಿ.ಪಿ.ಐ ಸಂಘಟನೆ ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್.ಡಿ.ಪಿ.ಐ ಸಂಘಟನೆ ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್, ಶ್ರೀರಂಗಪಟ್ಟಣ ಬಳಿಯ ಜಾಮೀಯಾ ಮಸೀದಿಯನ್ನ ಒಡೆದು ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ. ಹಿಂದೆ ಅಲ್ಲಿ ಆಂಜನೇಯಸ್ವಾಮಿ ದೇವಾಲಯ ಇತ್ತು. ಅದನ್ನ ಟಿಪ್ಪು ಸುಲ್ತಾನ್ ಕೆಡವಿದ್ದಾರೆ ಅನ್ನೊ ವಿವಾದ ಮಾಡ್ತಿದ್ದಾರೆ. ಈ ಮೂಲಕ ಕೋಮು ಸೌಹಾರ್ದ ಕದಡುವ ಕೆಲಸ ಮಾಡಲಾಗ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗ್ತಿದೆ. ಇಂತಹ ವಾತಾವರಣ ಸೃಷ್ಠಿ ಮಾಡೋದು ಖಂಡನೀಯ. 1947ರ ಕಾನೂನಿನ ಪ್ರಕಾರ  ದೇವಾಲಯ, ಮಸೀದಿ ಸ್ಥಳಗಳ ಯಥಾಸ್ಥಿತಿ ಕಾಪಾಡಬೇಕು. ಅದನ್ನ ಬದಲಾವಣೆ ಮಾಡುವುದು, ವಿವಾದ ಮಾಡುವುದು ಕಾನೂನು ಬಾಹಿರ. ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಬಂಧಿಸಬೇಕು. ದಕ್ಷಿಣ ವಲಯ ಐಜಿಪಿ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡುತ್ತೇವೆ ಎಂದರು.

ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಯಂತ್ರ ಕುಸಿದುಬಿದ್ದಿದೆ. ಗುತ್ತಿಗೆದಾರರಿಂದ ಲಂಚ ಕೇಳ್ತಿರೋದು ದೇಶವ್ಯಾಪಿ ಹರಿದಾಡ್ತಿದೆ. ಬೊಮ್ಮಾಯಿರವರ ಸರ್ಕಾರದಲ್ಲಿ ಪರ್ಸೆಂಟೇಜ್ ಲಂಚ ನೀಡಬೇಕಾಗಿದೆ. ಮಳೆಹಾನಿ, ಬೆಳೆಹಾನಿ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಈ ವಿಚಾರವನ್ನ ಡೈವರ್ಟ್ ಮಾಡೊದಿಕ್ಕೆ ಸಂಘಟನೆಗಳ ಬೆಂಬಲ ಪಡೆದು ಕೋಮು ಕದಡುವ ಕೆಲಸ ವಾಗ್ತಿದೆ. ಬಿಜೆಪಿ ಸರ್ಕಾರಕ್ಕೆ ಜನರು ತಕ್ಕ ಪಾಠವನ್ನ ಕಲಿಸಬೇಕು ಎಂದು ಅಬ್ದುಲ್ ಮಜೀದ್ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ  ವಿಚಾರ ಕುರಿತು ಪ್ರತಿಕ್ರಿಯಿಸಿದ ಅಬ್ದುಲ್ ಮಜೀದ್, ಇದು ಕೇವಲ ಜನರನ್ನ ಡೈವರ್ಟ್ ಮಾಡುವ ಕೆಲಸ. ಧರ್ಮ ಪರಿವರ್ತನೆ, ಪ್ರಚಾರಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ. ಧರ್ಮದ ಬಗ್ಗೆ ಪ್ರಚಾರ ಮಾಡುವ ಸ್ವಾತಂತ್ರ್ಯ ಇದೆ. ಆದರೆ ಬಿಜೆಪಿ ಸರ್ಕಾರ ವಿಧಾನಸಭೆಯ ಕಲಾಪವನ್ನ ವ್ಯರ್ಥ ಮಾಡ್ತಿದೆ. ಬೇಡದ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗ್ತಿದೆ ಎಂದು ಆಕ್ಷೇಪಿಸಿದರು.

Key words: Jamia- mosque – Srirangapatna – threatened-SDPI- organization- accused-mysore