Sunday, September 13, 2026

BDA Apartments

ಯುಎಸ್ ಒಪೆನ್: ಮೂರನೇ ಸುತ್ತಿಗೆ ಫೆಡರರ್, ಸೆರೆನಾ BDA JK_Adv BDA Adv
Home Front Page ಯುಎಸ್ ಒಪೆನ್: ಮೂರನೇ ಸುತ್ತಿಗೆ ಫೆಡರರ್, ಸೆರೆನಾ

ಯುಎಸ್ ಒಪೆನ್: ಮೂರನೇ ಸುತ್ತಿಗೆ ಫೆಡರರ್, ಸೆರೆನಾ

ನ್ಯೂಯಾರ್ಕ್, ಆಗಸ್ಟ್ 30, 2019 (www.justkannada.in):  ಯುಎಸ್ ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಮ್ಮದೇ ದೇಶದ ವೈಲ್ಡ್‌ರ್ ಕಾರ್ಡ್ ಆಟಗಾರ್ತಿ ಕ್ಯಾಥೆರಿನ್ ಮೆಕ್ನೆಲ್ಲಿ ಅವರನ್ನು 5-7, 6-3, 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಸೆರೆನಾ ಉಳಿದೆರಡು ಸೆಟ್‌ಗಳಲ್ಲಿ ಜಯ ಸಾಧಿಸಿ ಮೂರನೇ ಸುತ್ತು ತಲುಪಿದರು. ವಿಶ್ವದ ನಂ.6ನೇ ಆಟಗಾರ್ತಿ ಸೆರೆನಾ 17ರ ಹರೆಯದ ಎದುರಾಳಿ ಕ್ಯಾಥೆರಿನ್ ಹುಟ್ಟುವ ಎರಡು ವರ್ಷಗಳ ಮೊದಲೇ ಯುಎಸ್ ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದರು

ಇನ್ನು ಜರ್ ಫೆಡರರ್ ಯು.ಎಸ್. ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಫೆಡರರ್ 99ನೇ ರ್ಯಾಂಕಿನ ಬೋಸ್ನಿಯದ ಡಮಿರ್ ಝುಂಹರ್‌ರನ್ನು 3-6, 6-2, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.