Wednesday, September 9, 2026

BDA Apartments

Home Crime ಮೈಸೂರು:  KSRTC ಬಸ್ ಸ್ಟೇರಿಂಗ್ ಕಟ್ ಆಗಿ ಅಪಘಾತ

ಮೈಸೂರು:  KSRTC ಬಸ್ ಸ್ಟೇರಿಂಗ್ ಕಟ್ ಆಗಿ ಅಪಘಾತ

ಮೈಸೂರು,ಸೆಪ್ಟಂಬರ್,9,2026 (www.justkannada.in): ಕೆಎಸ್ ಆರ್ ಟಿಸಿ ಬಸ್ ಸ್ಟೇರಿಂಗ್ ಕಟ್ ಆಗಿ ಅಪಘಾತ ಸಂಭವಿಸಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದ ಬಳಿ ನಡೆದಿದೆ.

ಬಸ್ ಡ್ರೈವರ್ ಕನಕರಾಜ್ ಅವರ ಸಮಯ ಪ್ರಜ್ಞೆ, ಚಾಣಾಕ್ಷತನದಿಂದ ದೊಡ್ಡ ದುರ‌ಂತ ತಪ್ಪಿದ್ದು ಸದ್ಯ ಬಸ್ ನಲ್ಲಿದ್ದ ಆರವತ್ತು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಕೆ.ಆರ್.ನಗರದಿಂದ  ರಾವಂದೂರು ಗ್ರಾಮಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.

ಸ್ಟೇರಿಂಗ್ ಕಟ್ ಆದ ಪರಿಣಾಮ ಬಸ್ ಪಲ್ಟಿಯಾಗಿದ್ದು ಹಲವರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Key words: Mysore, KSRTC Bus, accident