ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಮುಂದುವರೆದ ಪ್ರತಿಭಟನೆ: ಉಪವಾಸ ಸತ್ಯಾಗ್ರಹದ ಎಚ್ಚರಿಕೆ.

ಮೈಸೂರು,ನವೆಂಬರ್,12,2021(www.justkannada.in): ಸ್ಟೇಫಂಡ್ ಹಾಗೂ ಕೋವಿಡ್ ಅಲೋಯನ್ಸ್ ನೀಡಿಲ್ಲ ಎಂದು ಆರೋಪಿಸಿ ಮೈಸೂರು ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವೈದ್ಯಕೀಯ ವಿದ್ಯಾರ್ಥಿಗಳಿಂದ ಪ್ರತಿಭಟನೆ ಮುಂದುವರೆದಿದ್ದು, ನಗರದ ಕೆ.ಆರ್.ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿ ಆಕ್ರೋಶವ್ಯಕ್ತಪಡಿಸಿದರು. ಸ್ಟೇ ಫಂಡ್ ಎರಡು ತಿಂಗಳಿಂದ ನೀಡಲ್ಲ. ಕೋವಿಡ್ ಅಲೋನ್ಸ್ ಮೂರು ತಿಂಗಳು ಬಾಕಿ ಉಳಿಸಿಕೊಂಡಿದ್ದಾರೆ.

ಈ ಹಿಂದೆ ನೀಡಿದ ಕೋವಿಡ್  ಅಲೋಯನ್ಸ್ ಅನ್ನೂ ಕೂಡ ಮೆಡಿಕಲ್ ಕಾಲೇಜು ಕಡಿತಗೊಳಿಸಿದೆ. ಕಾಲೇಜಿನಲ್ಲಿ ಕೇಳಿದರೇ ಸರ್ಕಾರ ಕೊಟ್ಟಿಲ್ಲ ಅಂತ ಹೇಳುತ್ತಾರೆ. ಸರ್ಕಾರಕ್ಕೆ ಕೇಳಿದರೇ ಕಾಲೇಜಿಗೆ ಫ‌ಂಡ್ ಕಳುಹಿಸಿದ್ದೇವೆ ಅಂತ ಹೇಳ್ತಾರೆ. ಕೋವಿಡ್ ಸಂಧರ್ಭದಲ್ಲಿ ಪ್ರಾಣದ ಹಂಗು ತೊರೆದು‌ ಕೆಲಸ ಮಾಡಿದ್ದೇವೆ. ಹಣ ಕೊಟ್ಟು ಈಗ ಬೇರೊಂದು ರೂಪದಲ್ಲಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು.

ಅಲ್ಲದೆ ತುರ್ತು ಕೆಲಸಕ್ಕೆ ಮಾತ್ರ ಹಾಜರಾಗುತ್ತೇವೆ. ಸಮಸ್ಯೆ ಬಗೆಹರಿಯದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ  ವೈದ್ಯಕೀಯ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

key words: Continued -protest –medical- students – Mysore.