ಕಾಂಗ್ರೆಸ್ ನವರು ಕರ್ನಾಟಕವನ್ನ ತಮಿಳುನಾಡಿಗೆ ಅಡವಿಟ್ಟಿದ್ದಾರೆ- ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ.

ಕಲ್ಬುರ್ಗಿ, ಸೆಪ್ಟಂಬರ್,28,2023(www.justkannada.in):  ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ರೇವಣ್ಣ, ತಮಿಳುನಾಡಿಗೆ ಕಾಂಗ್ರೆಸ್  ನವರು ಕರ್ನಾಟಕವನ್ನ ಅಡವಿಟ್ಟಿದ್ದಾರೆ. ಇಂಡಿಯಾ ಮೈತ್ರಿಕೂಟ ಹೆಚ್ಚು  ಸೀಟ್ ಗೆಲ್ಲಲು ಕರ್ನಾಟಕವನ್ನ ಅಡವಿಟ್ಟಿದ್ದಾರೆ  ಕಾಂಗ್ರೆಸ್ ನಿಂದ ಅಪರೇಷನ ಹಸ್ತದ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. 1991ರಿಂದ ರಾಜಕೀಯ ಮಾಡುತ್ತಿದ್ದೇನೆ. ಕೋಮುವಾದಿಗಳನ್ನ ದೂರವಿಡಬೇಕು ಎನ್ನುತ್ತಾರೆ.  ಆದರೆ ನಮ್ಮನ್ನ ಯಾವ ರೀತಿ ನಡೆಸಿಕೊಂಡರು ಅಂತಾ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಎಲ್ಲರೂ ಒಟ್ಟಿಗೆ  ಕೂತು ಮಾತನಾಡಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ.  ನಮ್ಮ ಪಕ್ಷದ ಸಿದ್ದಾಂತ ಬಿಟ್ಟು ಮೈತ್ರಿ ಮಾಡಿಕೊಂಡಿಲ್ಲ ಎಂದು ಹೆಚ್.ಡಿ ರೇವಣ್ಣ ತಿಳಿಸಿದರು.

Key words:  Congress -stuck -Karnataka – Tamil Nadu- former minister- HD Revanna