Saturday, August 8, 2026

BDA Apartments

Home Front Page ನನಗೆ ಬೊಮ್ಮಾಯಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ: 2023ರವರೆಗೂ ಅವರೇ ಸಿಎಂ- ಸಚಿವ ಮುರುಗೇಶ್ ನಿರಾಣಿ.

ನನಗೆ ಬೊಮ್ಮಾಯಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ: 2023ರವರೆಗೂ ಅವರೇ ಸಿಎಂ- ಸಚಿವ ಮುರುಗೇಶ್ ನಿರಾಣಿ.

ಬೆಂಗಳೂರು,ಜನವರಿ,19,2022(www.justkannada.in): ನನಗೆ ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ. 2023ರವರೆಗೂ ಬೊಮ್ಮಾಯಿ ಅವರೇ ಸಿಎಂ ಆಗಿರಲಿದ್ದಾರೆ ಎಂದು  ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ಕೊಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರ ಉತ್ತಮ ಆಡಳಿತದಿಂದ ನಾವೆಲ್ಲರೂ ಖುಷಿಯಾಗಿದ್ದೇವೆ. ಯಾವ ಕಾರಣಕ್ಕೂ ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ. ಸಿಎಂ ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಲು ಸಾಧ್ಯವಿಲ್ಲ.  ನಾನು ಮತ್ತು ಬೊಮ್ಮಾಯಿ ಒಂದೆ ತಾಯಿ ಮಕ್ಕಳಂತಿದ್ದೇವೆ. ಒಂದೇ ಕಾಲೇಜಿನಲ್ಲೇ ಓದಿದ್ದೇವೆ.  ಮೂವತ್ತು ವರ್ಷಗಳಿಂದ ನಮ್ಮ ನಡುವೆ ಸಂಬಂದ ಇದೆ. ನಮ್ಮ ಲ್ಲಿ ಯಾವುದೇ ಭಿನ್ನಾಭಿಪ್ರಾಯ  ಬರಲು ಸಾಧ್ಯವಿಲ್ಲ, ನನಗೆ ಬೊಮ್ಮಾಯಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದರು.nirani

ರಾಜ್ಯ ಬಿಜೆಪಿ ಘಟಕದಲ್ಲಿ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮುರುಗೇಶ್ ನಿರಾಣಿ,  ಹೈಕಮಾಂಡ್ ಅಂತಹ ಯಾವುದೇ ಘೊಷಣೆ ಮಾಡಿಲ್ಲ.  ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ.  ಈಗಾಗಲೇ 2 ವರ್ಷ ಪೂರೈಸಿದ್ದಾರೆ. ಪಕ್ಷದಲ್ಲಿ ಅಧ್ಯಕ್ಷರ ಅಧಿಕಾರವಧಿ ಇನ್ನು  3ವರ್ಷ ಇರಲಿದೆ ಎಂದರು.

Key words: cm Bommai- Minister- Murugesh Nirani.