ದೇಶದಲ್ಲಿ ಕೊರೋನಾ ಏರಿಳಿಕೆ:  ಒಂದೇ ದಿನ 25,072 ಕೋವಿಡ್‌ ಪ್ರಕರಣಗಳು ಪತ್ತೆ.

0
1

ನವದೆಹಲಿ.ಆಗಸ್ಟ್,23,2021(www.justkannada.in) ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣದ ಏರಿಳಿಕೆ ಎಂದಿನಂತೆ ಮುಂದುವರೆದಿದ್ದು, ದೇಶದಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 25,072 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ಗಂಟೆ ಅವಧಿಯಲ್ಲಿ  ಕೊರೋನಾಗೆ 389 ಮಂದಿ ಬಲಿಯಾಗಿದ್ದಾರೆ.ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,24,49,306ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,34,756ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,33,924ಕ್ಕೆ ತಲುಪಿದೆ.

Key words: Corona – country-25,072 case-detected – single day.