ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ.

ಬೆಂಗಳೂರು,ಡಿಸೆಂಬರ್,2,2021(www.justkannada.in):  ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುವ ವೇಳೆ ಬಿದ್ದು ಹಿರಿಯ ನಟ ಶಿವರಾಂ (84) ಅವರು ಪೆಟ್ಟು ಮಾಡಿಕೊಂಡಿದ್ದು ಅವರನ್ನು ಸೀತಾ ಸರ್ಕಲ್‌  ಬಳಿಯ ಪ್ರಶಾಂತ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪ್ರಶಾಂತ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ನಟ ಶ್ರೀನಿವಾಸ್ ಮೂರ್ತಿ, ಹೊಸಕೆರೆಹಳ್ಳಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುವ ವೇಳೆ ಶಿವರಾಂ ಅವರು ಬಿದ್ದು ತಲೆಗೆ ಪೆಟ್ಟಾಗಿ ಸ್ಥಿತಿ ಗಂಭಿರವಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಶಿವರಾಂ ಅವರ ಪುತ್ರ ರವಿಶಂಕರ್ ಮಾತನಾಡಿದ್ದು, ನಮ್ಮ ತಂದೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿದೆ. ಹೀಗಾಗಿ ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ತಂದೆಗೆ ವಯಸ್ಸಾದ ಕಾರಣ ಶಸ್ತ್ರಚಿಕಿತ್ಸೆ ಮಾಡಲು ಆಗಿಲ್ಲ. ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.

ಶಿವರಾಂ ಅವರು ಹಲವು ದಶಕಗಳಿಂದ ಕನ್ನಡದಲ್ಲಿ ನಟಿಸುತ್ತಿದ್ದು, ನೂರಾರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

Key words: Senior actor- Shivaram’s- health condition – serious.