ಪೆನ್ ಡ್ರೈವ್ ಸೇರಿ ಹಲವು ದಾಖಲೆಗಳನ್ನ ನೀಡಿದ್ದೇನೆ- ಪೊಲೀಸ್ ವಿಚಾರಣೆ ಬಳಿಕ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿಕೆ.

ಬೆಂಗಳೂರು,ಡಿಸೆಂಬರ್,2,2021(www.justkannada.in):  ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಆರ್ ವಿಶ್ವನಾಥ್ ಅವರು ಪೊಲೀಸರ ವಿಚಾರಣೆ ಎದುರಿಸಿದ್ದು ಈ ವೇಳೆ ಹಲವು ದಾಖಲೆಗಳನ್ನ ನೀಡಿದ್ದಾರೆ.

ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯ ಪೊಲೀಸರು ಸುಮಾರು ಅರ್ಧಗಂಟೆಗಳ ಕಾಲ ಶಾಸಕ ಎಸ್.ಆರ್ ವಿಶ್ವನಾಥ್ ಅವರನ್ನ ವಿಚಾರಣೆ ನಡೆಸಿದರು.  ವಿಚಾರಣೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಸ್.ಆರ್ ವಿಶ್ವನಾಥ್, ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಪೆನ್ ಡ್ರೈವ್ ಸೇರಿ ಹಲವು ದಾಖಲೆಗಳನ್ನ ಪೊಲೀಸರಿಗೆ ನೀಡಿದ್ದೇನೆ. ಗೋಪಾಲಕೃಷ್ಣನನ್ನ ಬಂದಿಸಿ ಎಂದು ಹೇಳಿಲ್ಲ. ಕುಳ್ಳದೇವರಾಜ್ ಬಗ್ಗೆ ಮಾತನಾಡಿಲ್ಲ. ಮೊದಲಿನಿಂದಲೂ ನನ್ನ ಮೇಲೆ ಸಂಚು ನಡೆಯುತ್ತಿದೆ ಎಂದರು.

ಕುಳ್ಳದೇವರಾಜ್ ನನ್ನ ಭೇಟಿಯಾಗಿಲ್ಲ. ಕುಳ್ಳದೇವರಾಜ್ ಸುಳ್ಳು ಹೇಳುವುದರಲ್ಲಿ ನಿಸ್ಸಿಮ. ತಪ್ಪಿತಸ್ಥರ ಬಂಧನ ಅಲ್ಲ ಸೂಕ್ತಕ್ರಮ ಆಗಬೇಕು. ಇನ್ನು ಪೊಲೀಸರು ಯಾವಾಗ ಕರೆಯುತ್ತಾರೋ ಆಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಎಸ್.ಆರ್ ವಿಶ್ವನಾಥ್ ತಿಳಿಸಿದರು.

Key words: given- many documents- pen drive-MLA -SR Viswanath -after – police -inquiry.