Sunday, August 23, 2026

BDA Apartments

Home Crime ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಜೀವಂತ ಸಮಾಧಿ ಮಾಡಿದ್ದ ಇಬ್ಬರು ಅಂದರ್.

ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಜೀವಂತ ಸಮಾಧಿ ಮಾಡಿದ್ದ ಇಬ್ಬರು ಅಂದರ್.

ಮೈಸೂರು,ಡಿಸೆಂಬರ್,1,2021(www.justkannada.in):  ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಜೀವಂತ ಸಮಾಧಿ ಮಾಡಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

ಗೋಪಾಲ್ ಮತ್ತು ಅಶೋಕ್ ಬಂಧಿತ ಆರೋಪಿಗಳು. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹನಗೋಡಿನ ಬಿಬಿಸಿ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು. ಬಿಬಿಸಿ ಕಾಲೋನಿ ನಿವಾಸಿ ಕೃಷ್ಣ (33) ಎಂಬಾತನೇ ಜೀವಂತ ಸಮಾಧಿಯಾಗಿರುವ ವ್ಯಕ್ತಿ. ಕಳೆದ ನಾಲ್ಕು ದಿನಗಳ ಹಿಂದೆ ಕೃಷ್ಣನ ಸ್ನೇಹಿತರಾದ ಗೋಪಾಲ್ ಮತ್ತು ಅಶೋಕ್ ಕರೆದಿದ್ದರು. ಹೊಸೂರಿನ ಮಾರಮ್ಮನ ದೇವಸ್ಥಾನದ ಬಳಿಗೆ ಬರುವಂತೆ ಹೇಳಿದ್ದರು.ganja peddlers arrested by mysore police

ಕೃಷ್ಣ ಅಲ್ಲಿಗೆ ಹೋದಾಗ ಮೂವರು ಮದ್ಯ ಸೇವನೆ ಮಾಡಿದ್ದರು. ಆ ವೇಳೆ ಮಾತಿಗೆ ಮಾತು ಬೆಳೆದು ಕೃಷ್ಣನ ಮೇಲೆ ಅಶೋಕ್ ಮತ್ತು ಗೋಪಾಲ್ ಹಲ್ಲೆ ನಡೆಸಿದ್ದಾರೆ. ಬಳಿಕ ಸನಿಹದಲ್ಲಿದ್ದ ಜೆಸಿಬಿಯಿಂದ ಗುಂಡಿ ತೋಡಿ ಕೃಷ್ಣನನ್ನು ಜೀವಂತವಾಗಿಯೇ ಹೂತು ಹಾಕಿದ್ದಾರೆ. ಮರುದಿನ ಕೃಷ್ಣನಿಗಾಗಿ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಅಶೋಕ್ ಮತ್ತು ಗೋಪಾಲ್ ನನ್ನು ವಿಚಾರಿಸಿದಾಗ ನಮಗೇನು ಗೊತ್ತಿಲ್ಲ ಎಂದು ನಾಟಕವಾಡಿದ್ದಾರೆ‌. ಇದರಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ ಪರಿಣಾಮ ಸತ್ಯಾಂಶ ಬಯಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಸಂಗತಿ ಬೆಳಕಿಗೆ ಬಂದಿದೆ. ನಂತರ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ‌. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Arrest – two –murder-friend