ಸಂಸದ ಪ್ರತಾಪ್ ಸಿಂಹ ಎಳಸು, ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ- ಸಿಎಂ ಸಿದ್ಧರಾಮಯ್ಯ ಕಿಡಿ.

ಬೆಂಗಳೂರು,ಜೂನ್,14,2023(www.justkannada.in): ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್  ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಎಂ ಸಿದ‍್ಧರಾಮಯ್ಯ ಕಿಡಿಕಾರಿದ್ದಾರೆ.

ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಯಾರು ..? ನಾನು ವಿರೋಧ ಪಕ್ಷದವರ ಜತೆ ರಾಜಕೀಯವಾಗಿ ಮಾತನಾಡಲ್ಲ ತನಿಖೆ ಮಾಡಿಸಿ ಅಂತಾ  ಪ್ರತಾಪ್ ಸಿಂಹ ಹೇಳಿದ್ರಾ..? ಸಂಸದ ಪ್ರತಾಪ್ ಸಿಂಹ ಎಳಸು. ಪ್ರತಾಪ್ ಸಿಂಹಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಮೈಸೂರು –ಬೆಂಗಳೂರು ಹೈವೇ ಮಾಡಿಸಿದ್ದು ನಾನೇ ಅಂತಾರೆ ಎಂದು ಸಿಎಂ ಸಿದ‍್ಧರಾಮಯ್ಯ ವಾಗ್ದಾಳಿ ನಡೆಸಿದರು.

ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ, ನಿನ್ನೆ ಅಧಿಕೃತವಾಗಿ ಸಭೆ ನಡೆಸಿಲ್ಲ  ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚಿಸಲು ಶಾಸಕರ ಸಭೆ ಕರೆಯಲಾಗಿತ್ತು. ಬೆಂಗಳೂರು ನಗರ ಸಂಬಂಧ ಸಭೆ ಕರೆಯಲಾಗಿತ್ತು ಅಷ್ಟೆ.  ಸುರ್ಜೇವಾಲ ಶಾಂಗ್ರಿಲಾ ಹೋಟೆಲ್ ನಲ್ಲಿ ಇದ್ದರು ಡಿಕೆಶಿ ಭೇಟಿ ಮಾಡಲು ಹೋಗಿದ್ದರು.  ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಾದರೇ ಕೊಡಲಿ ಎಂದು ಹೇಳಿದರು.

…….

ENGLISH SUMMARY..

MP Pratap Simha lacks Political Maturity : Chief Minister Siddaramaiah

Bengaluru, June 14: Chief Minister Siddaramaiah opined that MP Pratap Simha lacks political maturity.

He was speaking to media persons here today.

Responding to thestatements made by MP Pratap Simha, the CM said ‘he says that he is responsible for the construction of Bengaluru roads. ‘Is he the MP for the Bengaluru roads’ questioned the CM. I have never spoken to opposition parties in my political life and never have visited their houses while in power. If I happened to come across them I will only talk courteously, but won’t discuss politics”, he added.
In response to the allegation made by MP Pratap Simha, that the Congress and the BJP had joined hands, the CM said that, ‘If they know who has joined hands, let them come out with information”. Responding about the MP’s statement regarding conducting investigation about Pay CM allegation made by the Congress, The Chief Minister questioned ‘did they ask us to carry out an investigation? It is up to us to decide when and by whom the investigation should be carried out.

Not an official meeting
Responding to a reporter’s question regarding two Government officials attending a meeting chaired by Karnataka in-charge Randeep Surjewala in yesterday’s BBMP meeting, the CM said that it was not an official meeting. He said that the Deputy Chief Minister met the MLAs and participated in the meeting to seek legal opinion Incidentally, they also spoke about the BBMP elections in the meeting. Surjewala was waiting to visit the Hebbal flyover the CM explained.

Key words: MP Pratap Simha – no -political maturity- CM -Siddaramaiah