Saturday, August 8, 2026

BDA Apartments

Home Front Page ಸಂಪುಟದಲ್ಲಿ ಶಾಸಕಿ ಅನ್ನಪೂರ್ಣರಿಗೆ ಅವಕಾಶ ನೀಡೋದು ಹೈಕಮಾಂಡ್ ಗೆ ಬಿಟ್ಟಿದ್ದು- ಸಚಿವ ಎಂ.ಬಿ ಪಾಟೀಲ್

ಸಂಪುಟದಲ್ಲಿ ಶಾಸಕಿ ಅನ್ನಪೂರ್ಣರಿಗೆ ಅವಕಾಶ ನೀಡೋದು ಹೈಕಮಾಂಡ್ ಗೆ ಬಿಟ್ಟಿದ್ದು- ಸಚಿವ ಎಂ.ಬಿ ಪಾಟೀಲ್

ಬಳ್ಳಾರಿ,ಆಗಸ್ಟ್,8,2026 (www.justkannada.in): ಸಚಿವ ಸಂಪುಟದಲ್ಲಿ ಶಾಸಕಿ ಅನ್ನಪೂರ್ಣ ಅವರಿಗೆ ಅವಕಾಶ ನೀಡೋದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಕುಟುಂಬದಂತೆ ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲ ಸಹಜ. ಹಿಂದೆ ಸಚಿವ ಸಂಪುಟದ ಗಾತ್ರ ದೊಡ್ಡದಿರುತ್ತಿತ್ತು.  ಈಗ ಹಾಗೆ ಇಲ್ಲ.   ಇದ್ದಿದ್ದರಲ್ಲೇ ಎಲ್ಲರನ್ನೂ ಸಮಾಧಾ ಮಾಡಬೇಕು. ಸಹಜವಾಗಿ ಎಲ್ಲರಿಗೂ ಮಂತ್ರಿ ಆಗಬೇಕು ಅನ್ನೋ ಆಸೆ ಇರುತ್ತದೆ. ಪ್ರಾದೇಶಿಕವಾರು ಜಾತಿವಾರು ಎಲ್ಲಾ ಕೂಡಿಕೊಂಡು ಮಾಡಬೇಕು ಎಂದರು.

ಸಂಫುಟದಲ್ಲಿ ಮಹಿಳೆಯರಿಗೆ ಅವಕಾಶ ಕೊಡುತ್ತಾರೆ. ಶಾಸಕಿ ಅನ್ನಪೂರ್ಣಕ್ಕೆ ಅವಕಾಶ ಕೊಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಯಾವ ರೀತಿಯಲ್ಲಿ ಬ್ಯಾಲೆನ್ಸ್ ಮಾಡುತ್ತಾರೋ ನೋಡಬೇಕು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Key words: Cabinet expansion, high command, Minister, M.B. Patil