Thursday, August 13, 2026

BDA Apartments

Home Front Page ರಾಜ್ಯದ ಕುಸಿದಿರುವ  ಆಡಳಿತ ಯಂತ್ರ ಸರಿದಾರಿಗೆ ತರುವುದೇ ನನ್ನ ಮೊದಲ ಗುರಿ- ವಿಧಾನಸಭೆಯಲ್ಲಿ ಸಿಎಂ ಬಿ.ಎಸ್...

ರಾಜ್ಯದ ಕುಸಿದಿರುವ  ಆಡಳಿತ ಯಂತ್ರ ಸರಿದಾರಿಗೆ ತರುವುದೇ ನನ್ನ ಮೊದಲ ಗುರಿ- ವಿಧಾನಸಭೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ..

ಬೆಂಗಳೂರು,ಜು,29,2019(www.justkannada.in): ರಾಜ್ಯದ ಕುಸಿದಿರುವ  ಆಡಳಿತ ಯಂತ್ರ ಸರಿದಾರಿಗೆ ತರುವುದೇ ನನ್ನ ಮೊದಲ ಗುರಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆ ಪ್ರಸ್ತಾಪಿಸಿದ ಬಿಎಸ್ ಯಡಿಯೂರಪ್ಪ, ಹೆಚ್,ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ದ್ವೇಷದ ರಾಜಕಾರಣ ಮಾಡಲಿಲ್ಲ. ಅವರು ವೈಯಕ್ತಿಕ ದ್ವೇಷ ಮಾಡಿಲ್ಲ. ನಾನು ದ್ವೇಷದ ರಾಜಕಾರಣ ಮಾಡಲ್ಲ. ಯಾರೇ ನನ್ನನ್ನ ದ್ವೇಷಿಸಿದರೂ ಪ್ರೀತಿಸುವೆ ಎಂದರು.

ಹಾಗೆಯೇ ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ಅದನ್ನ ಸರಿದಾರಿಗೆ ತರುವುದೇ ನನ್ನ ಮೊದಲ ಗುರಿ.  ರಾಜ್ಯದಲ್ಲಿ ಮಳೆಕೊರತೆ ಇದೆ, ಬರಗಾಲವಿದೆ. ಈಗಾಗಿ ರಾಜ್ಯದ ಈ ಪರಿಸ್ಥಿತಿಯನ್ನ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬಿಎಸ್ ವೈ ತಿಳಿಸಿದರು.

Key words: CM BS Yeddyurappa- statement – Legislative Assembly -first aim –administrative