Tuesday, August 25, 2026

BDA Apartments

Home Front Page ಮೈಸೂರು ಬಿಜೆಪಿ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ: ಸಾಧಕರಿಗೆ ಸನ್ಮಾನ.

ಮೈಸೂರು ಬಿಜೆಪಿ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ: ಸಾಧಕರಿಗೆ ಸನ್ಮಾನ.

ಮೈಸೂರು,ನವೆಂಬರ್,22,2021(www.justkannada.in): ಇಂದು ಮೈಸೂರಿನ ಭಾರತೀಯ ಜನತಾ ಪಾರ್ಟಿಯ ಕಾರ್ಯಲಯದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕನಕದಾಸರ ಜಯಂತಿ ಯನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಸಂಸ್ಕತ ಪತ್ರಿಕೆಯ ಸುಧರ್ಮ ಪತ್ರಿಕೆಯ ಸಂಪಾದಕರಾದ ಕೆ.ಎಸ್.ವಿಜಯಲಕ್ಷ್ಮಿ, ಶಿಲ್ಪಕಾರರಾದ ಯೋಗರಾಜ್ ಶಿಲ್ಪಿ  ಹಾಗೂ ಗೋವಾದಲ್ಲಿ ನಡೆದ ರಾಷ್ಟ್ರೀಯ ಯೋಗದಿನ ದಲ್ಲಿ ಚಿನ್ನದ ಪದಕ ಪಡೆದ ಯೋಗ ಪಟು ಹರಿ ಅವರಿಗೆ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ನಗರ ಭಾ.ಜ.ಪ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ, ಗ್ರಾಮಾಂತರ ಅಧ್ಯಕ್ಷರಾದ ಮಂಗಳ ಸೋಮಶೇಖರ್, ಮಹಾ ಪೌರರಾದ ಸುನಂದ ಪಾಲನೇತ್ರ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು, ಮಾಜಿ ಸಚಿವ ವಿಜಯಶಂಕರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮೈವಿ.ರವಿಶಂಕರ್, ನಿಗಮ ಮಂಡಳಿ ಅಧ್ಯಕ್ಷ  ರಾಜೀವ್, ಚಿಕ್ಕಮ ಬಸವರಾಜ್, ಕೌಟಿಲ್ಯ ರಘು, ಹೇಮಂತ್ ಗೌಡ, ಸುರೇಶ್ ಬಾಬು, ಅನಿಲ್ ಥಾಮಸ್, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ಬಿ.ಎಂ.ರಘು,ನರಸಿಂಹ ರಾಜ ಕ್ಷೇತ್ರದ ಅಧ್ಯಕ್ಷರಾದ ಭಾನು ಪ್ರಕಾಶ, ನಗರಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್,ಜಗದೀಶ್ ಮಾಜಿ ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್, ಗೋಪಾಲ್, ಮಣಿರತ್ನಂ, ಸೂರಜ್, ಕೃಷ್ಣ,ಜೀವನ್, ಕೇಬಲ್ ಮಹೇಶ್,ಜಯರಾಮ್,ರವಿತೇಜ,ಸೂರಜ್ ಇದ್ದರು.

Key words: Kanakadasa Jayanti -celebration – Mysore- BJP office