Sunday, August 23, 2026

BDA Apartments

Home Front Page ಮೇಕೆದಾಟು ರಾಜಕೀಯ ಸ್ವರೂಪ ಪಡೆಯುತ್ತಿದೆ:ಸರ್ವಪಕ್ಷದ ಸಭೆ ಕರೆದು ಚರ್ಚಿಸಲಿ- ವಾಟಾಳ್ ನಾಗರಾಜ್ ಆಗ್ರಹ.

ಮೇಕೆದಾಟು ರಾಜಕೀಯ ಸ್ವರೂಪ ಪಡೆಯುತ್ತಿದೆ:ಸರ್ವಪಕ್ಷದ ಸಭೆ ಕರೆದು ಚರ್ಚಿಸಲಿ- ವಾಟಾಳ್ ನಾಗರಾಜ್ ಆಗ್ರಹ.

ರಾಮನಗರ,ಜನವರಿ,4,2022(www.justkannada.in): ಮೇಕೆದಾಟು ಯೋಜನೆ ರಾಜಕೀಯ ಸ್ವರೂಪ ಪಡೆಯುತ್ತಿದೆ. ಸರ್ಕಾರ ಸರ್ವಪಕ್ಷದ ಸಭೆ ಕರೆದು ಚರ್ಚಿಸಲಿ ಎಂದು ಕನ್ನಡಪರ ಹೋರಾಟಗಾರ  ವಾಟಾಳ್ ನಾಗರಾಜ್ ಆಗ್ರಹಿಸಿದರು.

ರಾಮನಗರದಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ಮೇಕದಾಟು ಯೋಜನೆ ವಿಚಾರ ರಾಜಕೀಯವಾಗಬಾರದು ಮೇಕೆದಾಟುಗಾಗಿ 2 ವರ್ಷದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಾದಯಾತ್ರೆಗೆ ಅಭ್ಯಂತರವಿಲ್ಲ.  ಆದರೆ ನಿಮ್ಮ ಸರ್ಕಾರವೇ ಇದ್ದಾಗ ಯಾಕೇ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಸರ್ವಪಕ್ಷ ಉನ್ನತ ಮಟ್ಟದ ಸಭೆ ಕರೆದು ಸರ್ಕಾರ ಚರ್ಚಿಸಲಿ. ರಾಜ್ಯ ಸಂಸದರು ಪ್ರಧಾನಿ ಮೋದಿ ಭೇಟಿ ಮಾಡಿ ಚರ್ಚಿಸಲಿ. ಇಲ್ಲದಿದ್ದರೇ ರಾಜೀನಾಮೆ ನೀಡಲಿ ಎಂದು ವಾಟಾಳ್ ನಾಗರಾಜ್ ಹೇಳಿದರು.

Key words: mekedatu plan-political-call -all-party- meeting – Vatal Nagaraj