ಮದುವೆಗೆ ಪೋಷಕರ ನಿರಾಕರಣೆ: ಲಾಡ್ಜ್‌ ನಲ್ಲಿ ಪ್ರೇಮಿಗಳು ಆತ್ಮಹತ್ಯೆ.

ಮೈಸೂರು,ಡಿಸೆಂಬರ್,1,2021(www.justkannada.in): ಮದುವೆ ಮಾಡಲು ಪೋಷಕರು ನಿರಾಕರಿಸಿದ್ದಕ್ಕೆ ಲಾಡ್ಜ್‌ ನಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಪ್ರೇಮಿಗಳಾದ ಬಿಜಿ.ಸತೀಶ್ (21) ಬಿಜಿ.ವರಲಕ್ಷ್ಮಿ (20) ಮೃತ ಪ್ರೇಮಿಗಳು.ಲಾಡ್ಜ್‌ ನಲ್ಲಿ ಸೀಲಿಂಗ್ ಕೊಕ್ಕೆಗೆ ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ

ನಿನ್ನೆ ಸಂಜೆ ಲಾಡ್ಜ್ ಬುಕ್ ಮಾಡಿದದ್ದ ಪ್ರೇಮಿಗಳು ರಾತ್ರಿಯೂ ಹೊರ ಬಂದಿರಲಿಲ್ಲ.ಬೆಳಿಗ್ಗೆಯೂ ಹೊರ ಬಾರದ ಹಿನ್ನಲೆ, ರೂಮ್ ಬಳಿ ತೆರಳಿ ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಲಾಡ್ಜ್‌ ಮಾಲೀಕ ಲಷ್ಕರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಈ ಜೋಡಿ 4 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ಮಧ್ಯೆ ಸರ್ಕಾರಿ ಕೆಲಸದ ನಂತರ ಮದುವೆ ಮಾಡುವುದಾಗಿ ಹುಡುಗಿ ಮನೆಯವರು ಹೇಳಿದ್ದರು. ಬಿಎ ಓದಿದ್ದ ಯುವಕ ಪೊಲೀಸ್ ಕೆಲಸಕ್ಕೆ ಯತ್ನ ಮಾಡುತ್ತಿದ್ದನು. ಯುವತಿ ನರ್ಸಿಂಗ್ ಓದುತ್ತಿದ್ದಳು.

ಕೆಲಸದ ನಂತರ ಮದುವೆ ಮಾಡುವುದಾಗಿ ಹುಡುಗಿ ತಂದೆ ಸಿದ್ದಲಿಂಗ ನಾಯ್ಕ ತಾಕೀತು ಮಾಡಿದ್ದರು.ಈ ನಡುವೆ ಪೋಷಕರ ನಡೆಗೆ ಬೇಸತ್ತು ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Key words: Parents- refuse- marry- Lovers- commit -suicide – lodge-mysore