ಮಗನ ಅಪ್ರಾಪ್ತ ಗೆಳತಿಯ ಮೇಲೆ ತಂದೆಯಿಂದಲೇ ಅತ್ಯಾಚಾರ.

ಚಿಕ್ಕಮಗಳೂರು,ನವೆಂಬರ್,10,2021(www.justkannada.in):  ಮಗನ ಅಪ್ರಾಪ್ತ ವಯಸ್ಸಿನ ಗೆಳತಿಯ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು  ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಂದ್ರು ಎಂಬಾತನೇ ಈ ಕೃತ್ಯವೆಸಗಿದ್ದಾನೆಂದು ಹೇಳಲಾಗಿದೆ.  ಈತನನ್ನ ಬಾಳೆ ಹೊನ್ನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಆಗಿದ್ದೇನು..?

ತನ್ನ ಗೆಳೆಯನನ್ನ ಹುಡುಕಿಕೊಂಡು ಸಂತ್ರಸ್ತೆ ಆತನ ಮನೆಗೆ ಹೋಗಿದ್ದಾಳೆ. ಈ ವೇಳೆ ಕೆಲಸಕ್ಕೆ ಹೋಗಿದ್ದಾನೆ ರಾತ್ರಿ ಬರುತ್ತಾನೆ ಎಂದು ಹೇಳಿ ಆರೋಪಿ ಚಂದ್ರು ಸಂತ್ರಸ್ತೆಯನ್ನ ಮನೆಯಲ್ಲೇ ಮಲಗುವಂತೆ ಹೇಳಿ ಅಲ್ಲೆ ಉಳಿಸಿಕೊಂಡಿದ್ದಾನೆ. ಆಗ ಅಪ್ರಾಪ್ತೆ ಮೇಲೆ ಚಂದ್ರು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಆರೋಪಿ ವಿರುದ್ಧ ಸಂತ್ರಸ್ತೆಯ ತಾಯಿ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಸದ್ಯ ಬಂಧಿಸಲಾಗಿದೆ.

Key words: Son-girl friend- rape- father-chikkamagalore

ENGLISH SUMMARY…

Father rapes son’s friend
Chikkamagaluru, November 10, 2021 (www.justkannada.in): A person has raped a minor girl who is said to be his son’s friend.
The incident has taken place in Balehonnuru Police Station limits, in N.R. Pura Taluk, Chikkamagaluru District. The person who has committed the crime is identified as Chandru. The Balehonnuru Police have arrested him.
The incident
It is learnt that the minor girl had visited one of her friend’s houses. However, his father informed the victim that his son had gone out for some work and would return late and convinced her to stay back in his house that night.
He reportedly raped the minor girl. The victim’s mother has filed a complaint against Chandru, at the Balehonnuru police station, who has been held.
Keywords: Father rapes son’s friend/ Chikkamagaluru