ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ: ಈ ಬಾರಿಯೂ ಬಿಜೆಪಿಯಲ್ಲಿ ಮೂವರು ಸಿಎಂ- ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ.

ಕಲ್ಬರ್ಗಿ,ನವೆಂಬರ್,10,2021(www.justkannada.in):  ರಾಜ್ಯದಲ್ಲಿ ಸದ್ಧು ಮಾಡುತ್ತಿರುವ ಬಿಟ್ ಕಾಯಿನ್ ದಂಧೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ: ಈ ಬಾರಿಯೂ ಬಿಜೆಪಿಯಲ್ಲಿ ಮೂವರು ಸಿಎಂ ಆಗಲಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಕಲ್ಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿಯವರಿದ್ದಾರೆ. ದಂಧೆಯಲ್ಲಿ ಬೇರೆ ಪಕ್ಷದವರು ಭಾಗಿಯಾಗಿದ್ದರೆ ತನಿಖೆಯಾಗಲಿ. ತನಿಖೆಯಾದರೇ ಯಾರಿದ್ದಾರೆಂದು ಬಹಿರಂಗವಾಗುತ್ತದೆ. ಬರೀ ಬಾಯಿ ಮಾತಲ್ಲಿ ತನಿಖೆಗೆ ಆದೇಶಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಅಷ್ಟೆ ಎಂದರು.

ಹ್ಯಾಕರ್ ಶ್ರೀಕಿಯಿಂದ ಜಪ್ತಿ ಮಾಡಿದ ಬಿಟ್ ಕಾಯಿನ್ ಎಲ್ಲಿ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಈ ದಂಧೆಯ  ತನಿಖೆಯನ್ನ ಉನ್ನತ ಮಟ್ಟದ ತನಿಖೆಗೆ ವಹಿಸಲಿ.   ಸಿಎಂ ಭಾಗಿಯಾಗಿದ್ದಾರೆ ಎಂದು ಹೇಳುತ್ತಿಲ್ಲ  ಪಾರದರ್ಶಕ ತನಿಖೆಯಾದ್ರೆ  ರಾಜ್ಯದಲ್ಲಿ  ಬಿಜೆಪಿಯಿಂದ 3ನೇ ಮುಖ್ಯಮಂತ್ರಿ ನೋಡುತ್ತೇವೆ ಎಂದರು.

Key words: bitcoin- case – CM -three CMs –BJP-MLA Priyank Kharge.