ಬಾಬ್ರಿ ಮಸೀದಿ ತೀರ್ಪಿನ ಬಗ್ಗೆ ನಟಿ ಪ್ರಣಿತಾ ಟ್ವೀಟ್

 

ಬೆಂಗಳೂರು,ಅಕ್ಟೋಬರ್,1,2020(www.justkannada.in): ನಿನ್ನೆಯಷ್ಟೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದು ಈ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟಿ ಪ್ರಣೀತಾ  ಟ್ವೀಟ್ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ನಟಿ ಪ್ರಣೀತಾ,  ಕರಸೇವಕರ ಮೇಲೆ ಪೊಲೀಸರ ತಂಡ ಗುಂಡು  ಹಾರಿಸಿದಾಗ ನ್ಯಾಯಾ ಎಲ್ಲಿತ್ತು..? ರಾಜಕೀಯ ನಾಯಕರನ್ನು ಬಂಧಿಸುವಾಗ ಕಾನೂನಿನ ನಿಯಮ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ 32 ಆರೋಪಿಗಳನ್ನು ಖುಲಾಸೆಗೊಳಿಸಿ, ಸಿಬಿಐ ವಿಶೆಷ ಕೋರ್ಟ್ ನಿನ್ನೆ ತೀರ್ಪು ಪ್ರಕಟಿಸಿದೆ.

 

Key words: Actress Pranitha tweeted about Babri Masjid verdict