ದೇಶದಲ್ಲಿ ಮತ್ತೆ ಕೊರೋನಾ ಏರಿಕೆ: ಒಂದೇ ದಿನ 13,154 ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ, ಡಿಸೆಂಬರ್ 30,2021(www.justkannada.in): ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದೊಂದು ತಿಂಗಳಿನಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ 10,000ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.

ಹೌದು, ಕಳೆದ 24 ಗಂಟೆಗಳಲ್ಲಿ 13,154 ಮಂದಿಗೆ  ಕೊರೋನಾ ಸೋಂಕು ದೃಢಪಟ್ಟಿದೆ. ಒಂದೇ ದಿನದಲ್ಲಿ 268  ಕೊರೋನಾದಿಂದ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 7,486 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಈವರೆಗೆ 3,42,58,778 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 4,80,860 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 961ಕ್ಕೆ ಏರಿಕೆಯಾಗಿದೆ. ದೆಹಲಿ 263, ಮಹಾರಾಷ್ಟ್ರ 252 ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದ್ದು, ಅತಿಹೆಚ್ಚು ಪ್ರಕರಣಗಳನ್ನು ವರದಿ ಮಾಡಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Key words: Corona- rise -again – country-13,154 Covid cases – single day.

ENGLISH SUMMARY…

Corona cases in the country increase again: 13,154 new cases reported in 24 hours
New Delhi, December 30, 2021 (www.justkannada.in): The number of COVID cases is increasing again in the country. The total number of cases has crossed 10,000 in the last month.
13,154 new cases have been reported in the last 24 hours, and 268 people have lost their lives at the same time. 7,486 people have recovered, according to information provided by the Union Health Ministry.
The total number of people who have recovered from COVID-19 has increased to 3,42,58,778, and the total number of people who have lost their lives has increased to 4,80,860.
The number of the new COVID variant Omicron cases has increased to 961 in the country. The highest has been reported from Delhi (263), followed by Maharashtra (252).
Keywords: COVID-19/ Omicron/ increase