ಡಿ.31ರ ಕರ್ನಾಟಕ ಬಂದ್ ಗೆ ನನ್ನ ಬೆಂಬಲವಿಲ್ಲ- ಸಂಸದೆ ಸುಮಲತಾ ಅಂಬರೀಶ್.

ಮಂಡ್ಯ,ಡಿಸೆಂಬರ್,27,2021(www.justkannada.in): ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರೆ ನೀಡಿರುವ ಕರ್ನಾಟಕ  ಬಂದ್ ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಬಂದ್ ಗೆ ನನ್ನ ಬೆಂಬಲವಿಲ್ಲ, ಹೋರಾಟಕ್ಕೆ ಮಾತ್ರ ನನ್ನ ಬೆಂಬಲ ಎಂದಿದ್ದಾರೆ.

ಸಮಸ್ಯೆಗೆ ಪರಿಹಾರ ಸಿಗೋದಾದ್ರೆ ಬಂದ್ ಮಾಡಬೇಕು. ಬಂದ್ ನಿಂದ ಯಾರಿಗೆ ಉಪಯೋಗ, ಯಾರಿಗೆ ನಷ್ಟ ಯೋಚಿಸಬೇಕು. ಬಂದ್ ನಿಂದ ನಷ್ಟವಾಗುತ್ತದೆ ಕೇವಲ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ವ್ಯಾಪಾರಸ್ಥರಿಗೂ ತೊಂದರೆಯಾಗುತ್ತದೆ. ಹೊಸ ವರ್ಷ ವೇಳೆ ವ್ಯಾಪಾರ ಹೆಚ್ಚಿರುತ್ತದೆ. ಬಂದ್ ಮಾಡುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಹೀಗಾಗಿ ಬಂದ್ ಗೆ ನನ್ನ ಬೆಂಬಲವಿಲ್ಲ.  ಹೋರಾಟಕ್ಕೆ ಮಾತ್ರ ನನ್ನ ಬೆಂಬಲವಿದೆ ಎಂದಿದ್ದಾರೆ.

Key words:  no support – Karnataka Bandh- MP- Sumalatha Ambarish,