ಡಿ.30 ರಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ.

ವಿಜಯಪುರ,ಡಿಸೆಂಬರ್,27,2021(www.justkannada.in):  ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನ್ನು ಇದೇ ಡಿಸೆಂಬರ್ 30ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮುಖ್ಯ ಅತಿಥಿಯಾಗಿ ಬೆಂಗಳೂರಿನ ನಿಮ್ಯಾನ್ಸ್ ನಿರ್ದೇಶಕಿ ಹಾಗೂ ಖ್ಯಾತ ಮಾನಸಿಕ ರೋಗತಜ್ಞೆ ಡಾ. ಪ್ರತಿಮಾ ಮೂರ್ತಿ ಘಟಿಕೋತ್ಸವ ಭಾಷಣ ಮಾತನಾಡಲಿದ್ದಾರೆ. ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಕುಲಪತಿ ಡಾ.ಆರ್.ಎಸ್.ಮುಧೋಳ ಸ್ವಾಗತಿಸಲಿದ್ದಾರೆ.

ಈ ಘಟಿಕೋತ್ಸವದಲ್ಲಿ ಒಟ್ಟಾರೆ 230 ಪದವಿ ಪ್ರಮಾಣಪತ್ರ ನೀಡಲಿದ್ದು, 02 ಎಂ.ಸಿ.ಎಚ್., 06 ಪಿ.ಎಚ್.ಡಿ., 57 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, 05 ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳು, 142 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಹಾಗೂ 14 ಬಿ.ಎಸ್ಸಿ. (ಎಂ.ಐ.ಟಿ), 04 ಒ.ಟಿ.ಟಿ. ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರಗಳನ್ನು ಆನ್‍ಲೈನ್ ಮೂಲಕ ಈ ಸಂದರ್ಭದಲ್ಲಿ ವಿತರಿಸಲಾಗುವುದು.

9ನೇ ಘಟಿಕೋತ್ಸವದಲ್ಲಿ 16 ಬಂಗಾರದ ಪದಕವನ್ನು ನೀಡಲಾಗುತ್ತಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ಡಾ.ಸೋಹಾನ್ ರಾವ್ ಅವರಿಗೆ 2 ಚಿನ್ನದ ಪದಕಗಳನ್ನು, ಎಂ.ಬಿ.ಬಿ.ಎಸ್ ಪದವಿ ವಿಭಾಗದಲ್ಲಿ ಡಾ. ದಾನೇಶ್ವರಿ ಕೋತ್ತಲಮಠ ಅವರಿಗೆ 6, ಡಾ. ಸೌರಭ ಎಸ್. ಪಾಟೀಲ್ ಅವರಿಗೆ 4 ಹಾಗೂ ಡಾ. ಶರಧಿ.ಎಸ್.ಪೇಠಕರ ಅವರು 2 ಚಿನ್ನದ ಪದಕಗಳನ್ನು ಈ ಘಟಕೋತ್ಸವದಲ್ಲಿ ಪಡೆಯಲಿದ್ದಾರೆ ಎಂದು ಡಾ.ಎಸ್.ಎಸ್.ದೇವರಮನಿ ಪರೀಕ್ಷಾ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಕೋವಿಡ್- 19 ಹಿನ್ನೆಯಲ್ಲಿ ವರ್ಚುವಲ್ ಘಟಿಕೋತ್ಸವ ನಡೆಯಲಿದ್ದು, ಬಿ.ಎಲ್.ಡಿ.ಯು ಫೇಸ್‍ಬುಕ್ ಹಾಗೂ ಬಿ.ಎಲ್.ಡಿ.ಇ(ಡಿ.ಯು) ಐಟಿ ವಿಭಾಗದ ಯೂಟ್ಯೂಬ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

Key words: 9th Convention -BLDE Deemed University –Dec 30.