ಖಾಸಗಿ ದೇವಸ್ಥಾನ ಅರ್ಚಕರಿಗೂ ಮತ್ತು ಅಡುಗೆ ಕೆಲಸಗಾರರಿಗೆ ದಿನಸಿ ಕಿಟ್ ನೀಡುವಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಲಿ- ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್..

ಮೈಸೂರು,ಮೇ,26,2021(www.justkannada.in): ಶ್ರೀನರಸಿಂಹ  ಜಯಂತಿಯ ಅಂಗವಾಗಿ ವಿಪ್ರಸಹಾಯವಾಣಿಯ ವತಿಯಿಂದ ವಿದ್ಯಾರಣ್ಯಪುರಂನಲ್ಲಿರುವ ಅವನಿ ಶಂಕರ ಮಠದಲ್ಲಿ ಪುರೋಹಿತರಿಗೆ ಅರ್ಚಕರಿಗೆ ಅಡುಗೆ ಕೆಲಸಗಾರರಿಗೆ  ಆಹಾರ ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು,jk

ಇದೇ ಸಂಧರ್ಭದಲ್ಲಿ ಇತಿಹಾಸ ತಜ್ಞರಾದ ಮೇಲುಕೋಟೆ ಡಾ. ಶೆಲ್ವಪಿಳೈ ಅಯ್ಯಂಗಾರ್ ರವರು  50ಮಂದಿ ಆರ್ಥಿಕವಾಗಿ ಹಿಂದುಳಿದ ಪುರೋಹಿತರಿಗೆ ಅಡುಗೆ ಕೆಲಸಗಾರರಿಗೆ ಆಹಾರಕಿಟ್ ವಿತರಿಸುವ ಮೂಲಕ ಚಾಲನೆ ನೀಡಿದರು,

ನಂತರ ಇತಿಹಾಸ ತಜ್ಞರಾದ ಮೇಲುಕೋಟೆ  ಡಾ. ಶೆಲ್ವಪಿಳೈ ಅಯ್ಯಂಗಾರ್ ರವರು ಮಾತನಾಡಿ  ಭಾರತದಲ್ಲಿ ರಾಮಾಯಣ ಮಹಾಭಾರತ ಪ್ರಾರಂಭದಿಂದಲೂ ರಾಜರ ಆಳ್ವಿಕೆ ಬ್ರಿಟೀಷ್ ಆಳ್ವಿಕೆ ಇಂದಿನ ಪ್ರಜಾಪ್ರಭುತ್ವದವರೆಗೂ ಬ್ರಾಹ್ಮಣ ಅರ್ಚಕ ಪುರೋಹಿತರ ಉಲ್ಲೇಖ ಅಸ್ಥಿತ್ವವಿದೆ, ಲೋಕಾ ಸಮಸ್ತಾ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಪುರೋಹಿತ ವರ್ಗಕ್ಕೆ ಸರ್ಕಾರ ಅಗತ್ಯಕರವಾಗಿ ಸಹಾಯ ಮಾಡುವಲ್ಲಿ ಮುಂದಾಗಬೇಕಿದೆ. state government -plan - provide -private temple -priests – cooks-History expert- Dr. Shelvapillai Iyengar.

ಮುಜರಾಯಿ ಇಲಾಖೆ ದೇವಸ್ಥಾನದ ವ್ಯಾಪ್ತಿಯಲ್ಲಿ ಒಳಪಡುವ ಅರ್ಚಕರಿಗೆ ತಸ್ಥಿಕ್ ಮತ್ತು ದಿನಸಿ ಅದು 3ತಿಂಗಳಿಗೆ  1500ರೂಗಳಂತೆ ಆಹಾರ ಕಿಟ್ ನೀಡುತ್ತಿದ್ದು, ಆದರೆ ಖಾಸಗಿ ದೇವಸ್ಥಾನ ಮತ್ತು ಅರಳಿಕಟ್ಟೆ ಗುಡಿಗೋಪುರಗಳಲ್ಲಿ ಪೂಜಾಕೈಂಕರ್ಯದಲ್ಲಿ ತೊಡಗಿರುವ ಅರ್ಚಕರು, ಮತ್ತು ಶ್ರಾದ್ಧಕಾರ್ಯ ಮಾಡಿಸುವ ಸಣ್ಣಪುಟ್ಟ ಪುರೋಹಿತ ವರ್ಗಕ್ಕೂ ಆರ್ಥಕ ನೆರವು ನೀಡುವತ್ತ ಮುಜರಾಯಿ ಇಲಾಖೆ ಇನ್ನು ಮುಂದಾದರು ಯೋಜನೆ ರೂಪಿಸಬೇಕಾಗಿದೆ, ಅಡುಗೆ ಕೆಲಸಗಾರರು ಅಸಂಘಟಿತ ವಲಯದ ಅಡಿಯಲ್ಲಿ ಬರುವದರಿಂದ ಕಳೆದ 1ವರುಷಗಳಿಂದ ಯಾವುದೇ ಕಾರ್ಯಕ್ರಮಗಳಿಲ್ಲ ಅಡುಗೆ ಕೆಲಸಗಾರರ ಕುಟುಂಬ ವರ್ಗದ ಹಿತದೃಷ್ಟಿಯಿಂದ ಕಾರ್ಮಿಕ ಇಲಾಖೆ ನೆರವು ನೀಡುವಲ್ಲಿ ಮುಂದಾಗಲಿ ಎಂದರು.

ಇತಿಹಾಸ ತಜ್ಞರಾದ ಮೇಲುಕೋಟೆ  ಡಾ. ಶೆಲ್ವಪಿಳೈ ಅಯ್ಯಂಗಾರ್, ಮುಖಂಡರಾದ ಶ್ರೀಧರ್ ಎಸ್.ಟಿ, ಗಾಯತ್ರಿ, ಆರ್.ಬಿ ನೌಕರಿ ಸುಮಾ, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್, ವಿಪ್ರಸಹಾಯವಾಣಿಯ ಸಂಚಾಲಕರಾದ ವಿಕ್ರಂ ಅಯ್ಯಂಗಾರ್, ಯುವಮುಖಂಡ ಅಜಯ್ ಶಾಸ್ತ್ರಿ, ಚಕ್ರಪಾಣಿ, ಲತಾ ಬಾಲಕೃಷ್ಣ, ಭೂಮಿಕಾ, ಮುಳ್ಳೂರು ಸುರೇಶ್, ಗೋಪಿನಾಥ್, ಚಿದಂಬರ್  ಇನ್ನಿತರರು ಇದ್ದರು.

Key words: state government -plan – provide -private temple -priests – cooks-History expert- Dr. Shelvapillai Iyengar.