ವಿಪಕ್ಷಗಳು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ- ಸಿಎಂ ವಿರುದ್ಧ ಬಿಜೆಪಿ ಸಂಸದ ಪರೋಕ್ಷ ಅಸಮಾಧಾನ…

ಬೆಂಗಳೂರು,ಮೇ,,25,2021(www.justkannada.in): ಸಂಸದರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಸ್ವಪಕ್ಷದ ಸಂಸದ ಬಿ.ಎನ್ ಬಚ್ಚೇಗೌಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

jk

ಹೌದು, ನೆಲಮಂಗಲದಲ್ಲಿ ನಡೆದ ಕೊರೋನಾ ನಿರ್ವಹಣೆ ಸಭೆಯಲ್ಲಿ ಮಾತನಾಡಿರುವ ಚಿಕ್ಕಬಳ್ಳಾಪುರ ಸಂಸದ ಬಿ.ಎನ್ ಬಚ್ಚೇಗೌಡ, ಸಂಸದರು ಮನೆಯಲ್ಲಿ ಕುಳಿತಿಲ್ಲ. ಅವರು ಕೆಲಸ ಮಾಡುತ್ತಿದ್ದಾರೆ. ನಮ್ಮಿಂದ ಯಾರಿಗೂ ತೊಂದರೆಯಾಗಿಲ್ಲ.. ಆದರೆ ಸಿಎಂ ಅವರು ಸಂಸದರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.BJP MP- BN Batchegauda -indirectly –outrage-against- CM BS yeddyurappa

ತಮಿಳುನಾಡಿನ ಸಿಎಂ ಸ್ಟಾಲಿನ್ ಸರ್ವಪಕ್ಷಗಳ ಸಮಿತಿ ರಚಿಸಿದ್ದಾರೆ. ಅಂತೆಯೇ  ವಿಪಕ್ಷಗಳು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಿಎಂ ವಿರುದ್ಧ ಬಿ.ಎನ್ ಬಚ್ಚೇಗೌಡ ಪರೋಕ್ಷವಾಗಿ ಕಿಡಿಕಾರಿದರು.

Key words: BJP MP- BN Batchegauda -indirectly –outrage-against- CM BS yeddyurappa