ಕ್ರಿಕೆಟ್ ಮೈದಾನದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ತಾಪ್ಸಿ !

ಬೆಂಗಳೂರು, ಜನವರಿ 30, 2019 (www.justkannada.in): ಮಿಥಾಲಿ ರಾಜ್ ಕ್ರಿಕೆಟ್‌ ಬದುಕಿಗೆ ಭರ್ತಿ ಎರಡು ದಶಕ ತುಂಬಿದೆ. ಈಗ ಅವರ ಜೀವನ ಕುರಿತ ‘ಶಹಬ್ಬಾಸ್‌ ಮಿಥು’ ಸಿನಿಮಾ ನಿರ್ಮಾಣವಾಗುತ್ತಿದೆ.

ನಟಿ ತಾಪ್ಸಿ ಪನ್ನು ಮಿಥಾಲಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಿಯಾ ಅವೆನ್ ಈ ಕಥೆ ಬರೆದಿದ್ದಾರೆ. ಇದಕ್ಕೆ ರಾಹುಲ್ಪ್‌ ದೊಲಾಕಿಯಾ ಆಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಗೊಂಡಿದೆ.

ಬ್ಯಾಟ್‌ ಬೀಸಿ ಬೌಂಡರಿ ಗೆರೆಯತ್ತ ತದೇಕ ದೃಷ್ಟಿ ನೆಟ್ಟಿರುವ ತಾಪ್ಸಿ ಪನ್ನು ನೋಟ ಬೆರಗು ಹುಟ್ಟಿಸುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ತಾಪ್ಸಿ ಈ ಫೋಟೊ ಹಂಚಿಕೊಂಡಿದ್ದಾರೆ.