ಕೋವಿಡ್ ನಿಯಮ ಅನುಸರಿಸಿ ಬೆಳಗಾವಿಯಲ್ಲೇ ಈ ಬಾರಿ ಅಧಿವೇಶನ- ಸಚಿವ ಆರ್.ಅಶೋಕ್.

ಬೆಂಗಳೂರು,ಡಿಸೆಂಬರ್,1,2021(www.justkannada.in): ಬೆಳಗಾವಿ  ಸುವರ್ಣಸೌಧದಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ  ನಡೆಸಲು ಶಾಸಕರ ಅಪಸ್ವರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಕೋವಿಡ್ ನಿಯಮ ಅನುಸರಿಸಿ ಬೆಳಗಾವಿಯಲ್ಲೇ ಈ ಬಾರಿ ಅಧಿವೇಶನ ನಡೆಸುತ್ತೇವೆ ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಈಗಾಗಲೇ ಎರಡು ವರ್ಷಗಳಿಂದ‌ ಬೆಳಗಾವಿ ಅಧಿವೇಶನವನ್ನು ಮುಂದೂಡುತ್ತಾ  ಬಂದಿದ್ದೇವೆ. ಈಗ ಇದ್ದಕ್ಕಿದ್ದಂತೆ ಅಧಿವೇಶನ ರದ್ದು ಮಾಡಿದ್ರೆ ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ ಜನರು ಕೂಡ ಭಯಭೀತರಾಗ್ತಾರೆ ಆದರಿಂದ ಇದು ಒಳ್ಳೆಯ ಸಂದೇಶ ಅಲ್ಲ. ಅಧಿವೇಶನ ಅಲ್ಲಿ ನಡೆಸಲೇಬೇಕಾಗಿದೆ. ಅದಕ್ಕಾಗಿ ಈ ಬಾರಿ ಅಲ್ಲಿ ಅಧಿವೇಶನ ನಡೆಸುತ್ತೇವೆ ಕೊವೀಡ್ ಸೂತ್ರ ತೆಗೆದುಕೊಂಡು ಅಧಿವೇಶನ ಸುಸೂತ್ರವಾಗಿ ನಡೆಸುತ್ತೇವೆ. ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಅಧಿವೇಶನ ನಡೆಯುತ್ತದೆ ಎಂದರು.

ರಾಜ್ಯಕ್ಕೆ ಒಮಿಕ್ರಾನ್ ಆತಂಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್ ಅಶೋಕ್, ಇದುವರೆಗೂ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾಗಿಲ್ಲ. ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ನಾವು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡೋಕೆ ಚಿಂತನೆ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ. ಆದರೆ ನಾವು ಮಾನಿಟರಿ ಮಾಡ್ತಿದ್ದೇವೆ. ಪ್ರತಿ ಜಿಲ್ಲೆಗಳ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ. ವಿಶೇಷವಾಗಿ ಕೇರಳ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ಎಚ್ಚರಿಕೆ ನೀಡಿದ್ದೇವೆ. ಆದರೆ ಸದ್ಯಕ್ಕಂತೂ ಎಲ್ಲಿಯೂ ಈ ರೀತಿಯ ಹೊಸತಳಿ ಪತ್ತೆಯಾಗಿಲ್ಲ.

ಇನ್ನು ದಕ್ಷಿಣ ಆಫ್ರಿಕಾ ಪ್ರಜೆಯ ರೋಗ ಲಕ್ಷಣ ವಿಭಿನ್ನ. ಒಂದು ವೇಳೆ  ಈ ರೋಗ ಒಮಿಕ್ರಾನ್ ರೀತಿ ಖಚಿತ ಆದರೆ ಬಿಗಿ ಕ್ರಮ ಗ್ಯಾರಂಟಿ. ಆದರೆ ಇದುವರೆಗೂ ಇದೇ ತಳಿ ಎಂದು ಖಚಿತ ಆಗಿಲ್ಲ. ಆದರೆ ಮುಂದೆ ಖಚಿತ ಆದರೆ ಬಿಗಿ ಕ್ರಮ ಮಾಡುತ್ತೇವೆ. ರಾಜ್ಯದ ಜನರ ಪ್ರಾಣ ರಕ್ಷಣೆ ಮಾಡೋದು ಸರ್ಕಾರದ ಜವಾಬ್ದಾರಿ. ಆ ದೃಷ್ಟಿಯಿಂದ ಎಲ್ಲಾ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷರಾಗಿ ನಮಗೆ ಆ ಜವಾಬ್ದಾರಿ ಇದೆ. ಒಂದು ವೇಳೆ ಆ ತಳಿ ಪತ್ತೆಯಾದ್ರೆ ಬಿಗಿ ಕ್ರಮ ಮಾಡೇ ಮಾಡುತ್ತೇವೆ ಎಂದು ಸಚಿವ ಅಶೋಕ್ ತಿಳಿಸಿದರು.

Key words: This time- session – covid rule- belgum-Minister- R. Ashok.

ENGLISH SUMMARY…

Winter session to be held at Belagavi bypassing COVID rules – Minister R. Ashok
Bengaluru, December 1, 2021 (www.justkannada.in): Revenue Minister R. Ashok has clarified that the winter session of the cabinet will be held at the Suvarna Soudha in Belagavi this year.
Speaking to the press persons today, he said, “We have been postponing the winter session at Belagavi for the last two years due to the pandemic. If it is cancelled this year also all of a sudden, it will send a wrong message to the people of that part of the state. They will become scared, which is not correct. Hence, it has become inevitable for us to conduct the winter session there. We are making all preparations to conduct the winter session at Belagavi by following all the COVID precautionary measures.”
Keywords: Revenue Minister R. Ashok/ winter session/ cabinet/ Belagavi