ಕೊಲೆಯತ್ನ ಪ್ರಕರಣ:  ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ..

ಮೈಸೂರು,ಮಾರ್ಚ್,26,2021(www.justkannada.in):  ವ್ಯಕ್ತಿಯೊಬ್ಬರನ್ನ ಕೊಲೆಗೆ ಯತ್ನಿಸಿದ ಆರೋಪಿಗೆ  ಹುಣಸೂರಿನ 8ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಾಬು ಜಗಜೀವನ್ ರಾಂ ಬೀದಿ, ಸರಗೂರು ಟೌನ್ ನಿವಾಸಿ ಹೆಜ್ಜೂರಪ್ಪ ಶಿಕ್ಷೆಗೆ ಗುರಿಯಾದ ಆರೋಪಿ. ಈತನ ವಿರುದ್ಧ ಸರಗೂರು ಪೊಲೀಸರು ಪ್ರಕರಣ ದಾಖಲಾಗಿತ್ತು.ase -court -sentenced -accused.

23-5-2012 ರಂದು ರಾತ್ರಿ ಸುಮಾರು 8.30 ಗಂಟೆ ಸಮಯದಲ್ಲಿ ಸದರಿ ಪೋಲೀಸ್ ರಾಣಾ ಸರಹದ್ದಿನ ಬಾಬು ಜಗಜೀವನ ರಾಂ ಬೀದಿಯಲ್ಲಿರುವ ಜಯರಾಮ ರವರ ಮನೆಯ ಮುಂದೆ ಶ್ರೀನಿವಾಸ ಅವರಿಗೂ  ಆರೋಪಿ ಹೆಜ್ಜೂರಪ್ಪಗೂ   ಗಲಾಟೆ ಆಗಿತ್ತು.  ಈ ವೇಳೆ ಆರೋಪಿ ಹೆಜ್ಜೂರಪ್ಪ  ಕೊಲೆಗೆ ಯತ್ನಿಸಿದ್ದನು. ಈಕುರಿತು ಪ್ರಕರಣ ದಾಖಲಾಗಿತ್ತು. .

ಇದೀಗ ಹುಣಸೂರಿನ 8ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಆರೋಪಿಗೆ  ಐ.ಪಿ.ಸಿ.ಕಲಂ.324ರ ಅಪರಾಧಕ್ಕೆ ರೂ.7,500/- ದಂಡ ವಿಧಿಸಿದ್ದಾರೆ. ಗಾಯಾಳ ಶ್ರೀನಿವಾಸನಿಗೆ ಪರಿಹಾರವಾಗಿ ರೂ.15,000/-ವನ್ನು ನೀಡಬೇಕೆಂದು ಆದೇಶ ಮಾಡಿದೆ.

Key words: case -court -sentenced -accused.