ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ ಅನಾವರಣ: ಪ್ರತಿಮೆ ನಿರ್ಮಾಣ ಮಾಡಿದ ಮೈಸೂರಿನ ಶಿಲ್ಪಿಗೆ ಸನ್ಮಾನ. ಮಾಡಿದ ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ನವೆಂಬರ್,4,2021(www.justkannada.in): ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಮಾಡಲಾಗಿದ್ದು  ಪ್ರತಿಮೆ ನಿರ್ಮಾಣ ಮಾಡಿದ ಮೈಸೂರಿನ ಶಿಲ್ಪಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅಭಿನಂದನೆ ಸಲ್ಲಿಸಿದರು.

ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬಕ್ಕೆ ಶಾಲು ಹೊದಿಸಿ, ಪೇಟ ಹಾಕಿ ಸನ್ಮಾನ ಮಾಡಲಾಯಿತು.  ಮೈಸೂರಿನ ಪಾಠಶಾಲೆ ವೃತ್ತದಲ್ಲಿರುವ ಶಿಲ್ಪಕಲಾ ಶಾಲೆಯಲ್ಲಿ ಸನ್ಮಾನ ಮಾಡಲಾಯಿತು. ಸಚಿವರಿಗೆ ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಸಾಥ್ ನೀಡಿದರು.

ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಹಾನಗಲ್ ನಲ್ಲಿ ಬಿಜೆಪಿ ಸೋಲು‌ ಹಿನ್ನಲೆ, ಸೋತ ಕೂಡಲೇ ಕಾಂಗ್ರೆಸ್ ನವರ ರೀತಿ ಮನೆಯಲ್ಲಿಯೇ ಕುಳಿತುಕೊಳ್ಳುವುದಿಲ್ಲ. ಒಂದು ಕಡೆ ಸೋತಿದ್ದೇವೆ, ಒಂದು ಕಡೆ ಗೆದ್ದಿದ್ದೇವೆ. ಯಾಕೆ ಸೋತಿದ್ದೇವಿ ಎಂದು ಪರಮಾರ್ಶೆ ಮಾಡಿಕೊಂಡು ತಪ್ಪು ತಿದ್ದಿಕೊಳ್ಳುತ್ತೆವೆ. ಕಾಂಗ್ರೆಸ್ ನವರು ಬಿಜೆಪಿ ಗೆದ್ದ ಕ್ಷೇತ್ರದ ಲೀಡ್ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಸೋತ ಕ್ಷೇತ್ರದ ಬಗ್ಗೆ ಮಾತನಾಡಿತ್ತಾರೆ. ಉಪಚುನಾವಣೆಯ ಈ‌ಸೋಲಿಗೂ ಪೆಟ್ರೋಲ್ ದರಗೂ ಸಂಬಂಧವಿಲ್ಲ. ದರ ಏರಿಕೆ ತಗ್ಗಿಸಲು ಜನರ ಆಶಯದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್ ದರ ಇಳಿಸಿವೆ. ಸಿದ್ದರಾಮಯ್ಯನವರು ಇದಕ್ಕೂ ವ್ಯಂಗ್ಯ ಮಾಡುತ್ತಾರೆ. ಅವರಿಂದ ಬೇರೆ ನಿರೀಕ್ಷಿಸಲು ಸಾಧ್ಯವಿಲ್ಲ. ವಿರೋಧ ಪಕ್ಷದ ನಾಯಕರು ಎಲ್ಲದಕ್ಕೂ ವಿರೋಧ ತಾನೇ ಮಾಡಬೇಕು. ಅದನ್ನೇ ಅವರು ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.

ನಿನ್ನೆ ಬಿದ್ದ ಭಾರಿ ಮಳೆ ಹಿನ್ನಲೆ. ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ದೊಡ್ಡ ಅನಾಹುತ ಸದ್ಯಕ್ಕೆ ಆಗಿಲ್ಲ. ಇವತ್ತು ಅದೇ ಪ್ರಮಾಣದಲ್ಲಿ ಮಳೆ ಬಂದರೆ ದೊಡ್ಡ ಮಟ್ಟದಲ್ಲಿ ಅನಾಹುತ‌ ಆಗುತ್ತದೆ. ಜನರಿಗೆ ಆದಷ್ಟು ತೊಂದರೆ ಆಗದಂತೆ ಸ್ಥಳೀಯ ಮಟ್ಟದಲ್ಲಿ ಕ್ರಮ‌ ಕೈಗೊಳ್ಳುತ್ತೆವೆ ಎಂದರು.

ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ರಸ್ತೆಯಲ್ಲೂ ಹೆಚ್ಚು‌ ಕುಸಿತವಾಗಿದೆ. ಶೀಘ್ರದಲ್ಲೇ ಲೋಕೋಪಯೋಗಿ ಸಚಿವರು ಸ್ಥಳಕ್ಕೆ ಭೇಟಿ‌ ನೀಡುತ್ತಾರೆ. ಪೂರ್ಣ ಪ್ರಮಾಣದಲ್ಲಿ ಆ ರಸ್ತೆಯನ್ನು ದುರಸ್ತಿ‌ ಮಾಡಲು ಕ್ರಮ‌ ಕೈಗೊಳುತ್ತೆವೆ. ಮಳೆ ಸಂಪೂರ್ಣವಾಗಿ ನಿಲ್ಲುವವರೆಗೂ ಶಾಶ್ವತ ಕಾಮಗಾರಿ‌ ಕಷ್ಟ. ಕಾಮಗಾರಿಗೆ ಬೇಕಾದ ತಯಾರಿಗಳನ್ನು‌ ಮಾಡಿಕೊಳ್ಳುತ್ತೆವೆ ಎಂದರು.

ಮೈಸೂರಿನಲ್ಲಿ ಮಳೆ ಹಾನು ಹಾಗೂ ರಸ್ತೆ ಗುಂಡಿ ಬಿದ್ದ ಹಿನ್ನೆಲೆ. ನಗರ ಪಾಲಿಕೆ ವ್ಯಾಪ್ತಿಯ ಪ್ರತೀ ವಾರ್ಡ್ ಗೂ 8ಲಕ್ಷ ಹಣ ಬಿಡುಗಡೆ ಮಾಡುತ್ತೇವೆ. ಕೆ ಆರ್ ಎಸ್ ನಲ್ಲಿ ಬಾಗಿನ ಸಮರ್ಪಣೆ ವೇಳೆ ಮೈಸೂರಿನ ಎಲ್ಲಾ ಜನಪ್ರತಿನಿಧಿಗಳು ಸಿಎಂ ಭೇಟಿಯಾಗಿದ್ರು. ಆ ವೇಳೆ ಗುಂಡಿ ಬಿದ್ದ ರಸ್ತೆ ದುರಸ್ತಿಗೆ ಹಣ ಬಿಡುಗಡೆ ಬಗ್ಗೆ ಸಿಎಂ ಭರವಸೆ ನೀಡಿದ್ರು. ಸಿಎಂ ಭರವಸೆ ‌ಮೇರೆಗೆ ಪ್ರತೀ ವಾರ್ಡ್ ಗೆ 8ಲಕ್ಷ ಹಣ ಬಿಡುಗಡೆ ಮಾಡಲಾಗುವುದು ಎಂದರು.

Key words: mysore-minister-ST Somashekar-shankaracharya –statue