ಮಂಗಳೂರು,ಜೂನ್,13 2026 (www.justkannada.in): ಕೆ.ಅಣ್ಣಾಮಲೈ ಬಿಜೆಪಿ ಪಕ್ಷ ತೊರೆದಿರುವುದು ಅದು ಅವರ ನಿರ್ಧಾರ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ರಾಧಾಮೋಹನ್ ದಾಸ್, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ನಮಗೆ ನಮ್ಮದೇ ಆದ ಒಂದು ಕಾರ್ಯ ಪದ್ದತಿ ಇದೆ. ನಾವು ದೀರ್ಘಾವಧಿಯ ಯೋಜನೆಗಳ ಮೇಲೆ ಕೆಲಸ ಮಾಡುತ್ತೇವೆ. ದೇಶದ ಭವಿಷ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಮುನ್ನಡೆಯುತ್ತೇವೆ ಎಂದರು.
ನಾವು ಅಲ್ಪಾವಧಿ ರಾಜಕಾರಣಧ ಬಗ್ಗೆ ಹೆಚ್ಚಿನ ಗಮನ ಕೊಡಲ್ಲ. ಅಣ್ಣಾಮಲೈ ಪಕ್ಷ ತೊರೆದಿರುವುದು ಅದು ಅವರ ನಿರ್ಧಾರ ಎಂದು ರಾಜ್ಯ ಬಿಜೆಪಿ ಉಸ್ತುವರಿ ರಾಧಾ ಮೋಹನ್ ದಾಸ್ ಹೇಳಿದರು.
Key words: K. Annamalai, decision, leave, BJP, Radha Mohan Da







