ಕರ್ನಾಟಕ ಬಂದ್ ಬೆಂಬಲಿಸುವಂತೆ ಆಗ್ರಹ: ವಾಟಾಳ್ ನಾಗರಾಜ್ ರಿಂದ ಉರುಳು ಸೇವೆ ಮಾಡಿ ಪ್ರತಿಭಟನೆ.

ಬೆಂಗಳೂರು,ಡಿಸೆಂಬರ್,27,2021(www.justkannada.in):  ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಡಿಸೆಂಬರ್ 31ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಮಲ್ಲೇಶ್ವರಂ ಸರ್ಕಲ್ ಬಳಿ ಉರುಳು ಸೇವೆ ಮಾಡಿ ಡಿ.31 ರಂದು ಕರ್ನಾಟಕ ಬಂದ್ ಎಂದು ಘೋಷಣೆ ಕೂಗಿ ಬಂದ್ ಗೆ ಬೆಂಬಲಿಸುವಂತೆ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗುತ್ತೆ. ಬಂದ್ ಗೆ 1800 ಸಂಘಗಳು ಬೆಂಬಲವಿದೆ.  ಸಿದ್ಧರಾಮಯ್ಯ ಸಹ ಬೆಂಬಲ ಸೂಚಿಸಿದ್ದಾರೆ. ಇದು ಪ್ರತಿಷ್ಟೆಗಾಗಿ ಮಾಡುತ್ತಿರುವ ಬಂದ್ ಅಲ್ಲ. ಕನ್ನಡಿಗರಿಗಾಗಿ ಮಾಡುತ್ತಿರುವ ಬಂದ್. ಕನ್ನಡ ಬಾವುಟ ಸುಟ್ಟು ಅಪಮಾನ ಮಾಡಿದ್ದಾರೆ.  ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಶಾಸಕರೇ ನಿಮಗೆ  ನೋವಾಗಲ್ವಾ..? ಅಪಮಾನ ಖಂಡಿಸದೇ ನೈತಿಕ ಬೆಂಬಲ ಅನ್ನೂದು ಎಷ್ಟು ಸರಿ. ಬಂದ್ ಗೆ ಬೆಂಬಲ ನೀಡಿ ಎಂದು ಆಗ್ರಹಿಸಿದರು.

ಬೆಂಗಳೂರು- ಮಹಾರಾಷ್ಟ್ರ ಹೆದ್ದಾರಿ ತಡೆದು ವಾಟಾಳ್ ನಾಗರಾಜ್  ಪ್ರತಿಭಟನೆ ನಡೆಸಲಿದ್ದಾರೆ.  ಗೊರಗುಂಟೆ ಪಾಳ್ಯ ಜಂಕ್ಷನ್ ಬಳಿ  ಕನ್ನಡ ಸಂಘಟನೆ ಕಾರ್ಯಕರ್ತರು ಮಧ್ಯಾಹ 1 ಗಂಟೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದಾರೆ.

Key words: Karnataka Bandh- urges- support-Vatal Nagaraj

ENGLISH SUMMARY….

Appeal to support Karnataka Bundh: Symbolic protest by Vatal Nagaraj
Bengaluru, December 27, 2021 (www.justkannada.in): Pro-Kannada activist Vatal Nagaraj today took out a protest in Bengaluru demanding everyone to support his call for Karnataka Bundh on December 31.
He took out a ‘Urulu Seve’ (rolling on the road) near the Malleswaram Circle in Bengaluru today. He called upon the people of the state to support the bundh. “The Karnataka Bundh will completely be successful. About 1800 various associations have extended their support. Even former CM Siddaramaiah has supported us. The bundh is not being done as a prestige issue. It is a decision taken for the cause of Kannadigas. They have insulted us by burning our flag,” he said and questioned the local MLA whether he doesn’t feel insulted.
Keywords: Vatal Nagaraj/ Urulu Seve/ protest/ Karnataka Bundh