ನೈಟ್ ಕರ್ಫ್ಯೂ ವಾಪಸ್ ಇಲ್ಲ: ಸೋಂಕು ಹೆಚ್ಚಾದ್ರೆ ಮತ್ತಷ್ಟು ಕಠಿಣ ಕ್ರಮ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಡಿಸೆಂಬರ್,27,2021(www.justkannada.in):  ಕೊರೋನಾ 3ನೇ ಅಲೆ , ಒಮಿಕ್ರಾನ್ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಇದಕ್ಕೆ ಉದ್ಯಮಗಳು ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ವಾಪಸ್ ಇಲ್ಲ. ಕೋವಿಡ್  ಸೋಂಕು ಹೆಚ್ಚಾದ್ರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ, ಕಠಿಣ ಕ್ರಮಗಳ ಕುರಿತು ಮಾತನಾಡಿದ ಸಚಿವ ಸುಧಾಕರ್,  ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ದಯವಿಟ್ಟು ಸಹಕಾರ ನೀಡಬೇಕು. ತೊಂದರೆ ಕೊಡಬೇಕು ಅನ್ನೋ ಉದ್ದೇಶ ನಮಗೆ ಇಲ್ಲ. ಉದ್ಯಮದವರು ಸಹಕಾರ ನೀಡಬೇಕು.

ಸರ್ಕಾರ ಜನರ ರಕ್ಷಣೆ ಆರೋಗ್ಯ ನೋಡುತ್ತೆ. ಕೆಲವರು ಲಾಭ ನಷ್ಟ ನೋಡುತ್ತಾರೆ. ಆದರೆ ಸೋಂಕು ನಿಯಂತ್ರಿಸಲು ಇಂತಹ ಕ್ರಮ ಅಗತ್ಯ  ಯಾವುದೇ ಚಟುವಟಿಕೆ ನಿಗ್ರಹಿಸುವ ಉದ್ದೇಶವಿಲ್ಲ.  ಬೇರೆ ರಾಷ್ಟ್ರಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕು ಹೆಚ್ಚಾದ್ರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Key words: night curfew –Increased- infection – further –step-Health Minister -Dr. K. Sudhakar.