Sunday, August 23, 2026

BDA Apartments

Home Front Page ಇದು ಪೊಲೀಸ್ ರಾಜ್ಯ ಅಲ್ಲ: ಹಕ್ಕುಚ್ಯುತಿ ಮಂಡಿಸುವೆ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ.

ಇದು ಪೊಲೀಸ್ ರಾಜ್ಯ ಅಲ್ಲ: ಹಕ್ಕುಚ್ಯುತಿ ಮಂಡಿಸುವೆ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ.

ಬೆಳಗಾವಿ,ಡಿಸೆಂಬರ್,16,2021(www.justkannada.in): ಬೆಳಗಾವಿಯ ಸುವರ್ಣಸೌಧದ ಬಳಿ ಪೊಲೀಸರು ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಗೆ ತಡೆಯೊಡ್ಡಿದ ಹಿನ್ನೆಲೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆದ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯನ್ನ ಸುವರ್ಣಸೌಧದಲ್ಲಿ ತಡೆ ಪೊಲೀಸರ ವಿರುದ್ಧ ಕಿಡಿಕಾರಿದ ಸಿದ್ಧರಾಮಯ್ಯ, ಪ್ರತಿಭಟನೆ ಮಾಡೊದು ನಮ್ಮ ಹಕ್ಕು. ನಮ್ಮನ್ನ ವಿಧಾನಸೌಧಕ್ಕೆ ಕಳಿಸುರುವುದು ಜನರು. ನಾವು ಎತ್ತಿನಗಾಡಿ ಸೈಕಲ್ ಯಾವುದಲ್ಲಾದ್ರೂ ಹೋಗ್ತಿವಿ ಇದನ್ನ ತಡೆಯಲು ಇವರು ಯಾರು.   ಇದು ಪೊಲೀಸ್ ರಾಜ್ಯ ಅಲ್ಲ ಪೊಲೀಸರ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆ ಎಂದರು.

ಸರ್ಕಾರ ಕಿತ್ತೊಗೆಯಲು ಜನ ನಿರ್ಧರಿಸಿದ್ದಾರೆ ಎಂದು ಸಿದ್ಧರಾಮಯ್ಯ ಗುಡುಗಿದರು. ಈ ಮಧ್ಯೆ ಧರಣಿನಿರತ ಪರಿಷತ್ ಸದಸ್ಯರು ಮತ್ತು ಶಾಸಕರಿಗೆ ಸುವರ್ಣಸೌಧದ ಒಳಗೆ ಹೋಗಲು ಅನುಮತಿ ನೀಡಲಾಗಿದೆ.

Key words: belagvi- congress-protest-formerCM- Siddaramaiah