‘ಅಪ್ಪು’ ನೆನೆದು ದೊಡ್ಮನೆ ಕುಟುಂಬ ಕಣ್ಣೀರು: ಮೇಣದ ಬತ್ತಿ ಹಚ್ಚಿ ಯುವರತ್ನನಿಗೆ ‘ದೀಪನಮನ’.

ಬೆಂಗಳೂರು,ನವೆಂಬರ್,16,2021(www.justkannada.in): ನಟ ಪುನೀತ್‌ ರಾಜ್‌ ಕುಮಾರ್‌ ಅವರು ನಿಧನರಾಗಿ ಇಂದಿಗೆ 19 ದಿನಗಳಾಗಿದ್ದು ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುನೀತ್ ನಮನ ಕಾರ್ಯಕ್ರಮದಲ್ಲಿ ಮೇಣದ ಬತ್ತಿ ಹಚ್ಚಿ ಅಪ್ಪುಗೆ ದೀಪನಮನ ಸಲ್ಲಿಸಲಾಯಿತು.

ಮೊದಲು ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಜೀವನ ಸಾಧನೆ ಕುರಿತು ಕಿರು ಚಿತ್ರ ಪ್ರದರ್ಶನ ಮಾಡಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ರಾಜಕೀಯ ಗಣ್ಯರು, ಕಲಾವಿದರು ಎಲ್ಲರೂ ಮೇಣದ ಬತ್ತಿ ಹಚ್ಚಿ ನಟ ಪುನೀತ್ ಗೆ ದೀಪನಮನ ಸಲ್ಲಿಸಿದರು. ನಂತರ ಒಂದು ನಿಮಿಷ ಮೌನಾಚಾರಣೆ ಮೂಲಕ ಅಗಲಿದ ಯುವರತ್ನನಿಗೆ ಶ್ರದ್ಧಾಂಜಲಿ  ಸಲ್ಲಿಕೆ ಮಾಡಲಾಯಿತು.

ಪುನೀತ್​ ರಾಜ್​ ಕುಮಾರ್​ ಅಗಲಿಕೆ ದೊಡ್ಮನೆಗೆ ಹಾಗೂ ಅವರ ಅಭಿಮಾನಿಗಳಿಗೆ ನೋವು ತಂದಿದೆ. ದೊಡ್ಮನೆಯ ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಶಿವರಾಜ್​ ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಅವರ ಕುಟುಂಬದವರು ‘ಪುನೀತ ನಮನ’ಕ್ಕೆ ಬಂದಿದ್ದಾರೆ. ನಟ ಪುನೀತ್ ಪತ್ನಿ ಅಶ್ವಿನಿ ಅವರಿಗೆ ನೋವು ಇನ್ನೂ ಕಡಿಮೆ ಆಗಿಲ್ಲ. 20 ದಿನ ಕಳೆದರೂ ಅವರ ಕಣ್ಣೀರು ನಿಂತಿಲ್ಲ. ಇಂದಿನ ಕಾರ್ಯಕ್ರಮದಲ್ಲೂ ಸಹ ಅವರು ಕಣ್ಣೀರು ಹಾಕಿದರು.

ಹಾಗೆಯೇ ನಟ ಶಿವರಾಜ್ ಕುಮಾರ್ ಸಹ ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯ ಕಂಡು ಬಂದಿತು. ಹೀಗೆ ದೊಡ್ಮನೆ ಕುಟುಂಬ ದುಃಖದಲ್ಲಿ ಮುಳುಗಿದೆ.

Key words:  Bangalore-punith namana- Condolences