‘ಪುನೀತ್ ನಮನ’ ಕಾರ್ಯಕ್ರಮ ಆರಂಭ: ಸಿಎಂ ಬೊಮ್ಮಾಯಿ, ಸಿದ್ಧರಾಮಯ್ಯ ಮತ್ತು ಬಿಎಸ್ ವೈ ಸೇರಿ ಗಣ್ಯಾತೀಗಣ್ಯರು ಭಾಗಿ.  

ಬೆಂಗಳೂರು,ನವೆಂಬರ್,16,2021(www.justkannada.in): ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಪುನೀತ್ ನಮನ ಕಾರ್ಯಕ್ರಮ ಪ್ರಾರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿನಿರಂಗದ ಅನೇಕ ದಿಗ್ಗಜರು, ದೊಡ್ಮನೆ ಕುಟುಂಬದವರು, ರಾಜಕೀಯ ರಂಗದ ಗಣ್ಯರ ದಂಡೇ  ಆಗಮಿಸಿದೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಆರ್.ಅಶೋಕ್, ಅರಗ ಜ್ಞಾನೇಂದ್ರ, ಬಿಸಿ ಪಾಟೀಲ್, ಮುನಿರತ್ನ ಸೇರಿ ಇನ್ನೀತರ ರಾಜಕೀಯ ಮುಖಂಡರು  ಪಾಲ್ಗೊಂಡಿದ್ದಾರೆ.

ಹಾಗೆಯೇ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಿರಿಯ ನಟರಾದ ದ್ವಾರಕೇಶ್, ಪ್ರಕಾಶ್ ರೈ, ರವಿಚಂದ್ರನ್, ಜಗ್ಗೇಶ್, ನಟರಾದ ಉಪೇಂದ್ರ, ಗಣೇಶ್, ಶರಣ್, ಶ್ರೀಕಾಂತ್ ಶರತ್ ಕುಮಾರ್, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಸೇರಿ ಸ್ಯಾಂಡಲ್ ವುಡ್ ಕಲಾವಿದರು, ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು, ಡಾ ರಾಜ್ ಕುಮಾರ್ ಕುಟುಂಬ ಸದಸ್ಯರು ಭಾಗವಹಿಸಿದ್ದಾರೆ.

Key words: Commencement – Puneet Namana –program-CM Bommai-Siddaramaiah- BSY