Saturday, August 8, 2026

BDA Apartments

Home Crime ವ್ಯಕ್ತಿ ಅಪಹರಿಸಿ ದರೋಡೆ ಪ್ರಕರಣ:  ಆರೋಪಿಗಳು ಅಂದರ್

ವ್ಯಕ್ತಿ ಅಪಹರಿಸಿ ದರೋಡೆ ಪ್ರಕರಣ:  ಆರೋಪಿಗಳು ಅಂದರ್

ಮೈಸೂರು,ಆಗಸ್ಟ್,8,2026 (www.justkannada.in): ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನ ಕಾರಿನಲ್ಲಿ ಬಂದು ಅಡ್ಡಗಟ್ಟಿ ಅಪಹರಿಸಿ ಹಣ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ವರುಣ ಹೋಬಳಿ ಮುದ್ದೇಗೌಡನಹುಂಡಿ ಗ್ರಾಮದ ರಾಮು ಎಂಬುವವರೇ ದರೋಡೆಗೊಳಗಾದವರು. ಸಿದ್ದರಾಜು, ಕಾರ್ತಿಕ್.ಕೆ.ಎಂ, ಆನಂದ.ಎನ್, ಪುರುಷೋತ್ತಮ್.ಎ.ಎಸ್ ಬಂಧಿತ ಆರೋಪಿಗಳು.

ಬಂಧಿತರಿಂದ 4.30 ಲಕ್ಷ ರೂ., ಕೆ.ಎ.08 ಎಂ 3252 ನಂಬರ್ ನ  ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್‌ಕಾರು, ಹೊಂಡಾ ಶೈನ್ ಬೈಕ್,  ಹೊಂಡಾ ಆಕ್ಟಿವಾ ಸ್ಕೂಟರ್. ಆರೋಪಿಗಳ  ಬಳಿ ಇದ್ದ 5 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತೋಟದ ಮನೆಯಿಂದ ತೆರಳುತ್ತಿದ್ದ ರಾಮು ಅವರನ್ನು ಆರೋಪಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿ ಅಪಹರಿಸಿ ರಾಮು ಅವರ ಬಳಿ ಇದ್ದ  ಚಿನ್ನಾಭರಣ ದೋಚಿದ್ದಲ್ಲದೇ 16 ಲಕ್ಷ ರೂ. ಹಣವನ್ನು ತರಿಸಿಕೊಂಡು ದರೋಡೆ ಮಾಡಿ ಪರಾರಿಯಾಗಿದ್ದರು.

ಈ ಕುರಿತು ರಾಮು ಅವರು ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಮೈಸೂರು ಗ್ರಾಮಾಂತರ ವೃತ್ತದ ಸಿಪಿಐ ಡಿ.ಬಿ.ಜಯಪ್ರಕಾಶ್‌ ಅವರ ನೇತೃತ್ವದಲ್ಲಿ ಪ್ರಕರಣದ ಪತ್ತೆಗಾಗಿ ನೇಮಿಸಿದ್ದ ವರುಣ ಪೊಲೀಸ್ ಠಾಣಾ ಪಿಎಸ್‌ಐ ಸದಾಶಿವ ತಿಪರಡ್ಡಿ ಅವರ ತಂಡದಿಂದ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಲಾಗಿದೆ.

Key words: Kidnapping, robbery case,  Accused, arrested, Mysore