Saturday, August 22, 2026

BDA Apartments

Home Front Page ಮೇಕೆದಾಟು ಯೋಜನೆಗಾಗಿ ಸಿ.ಪಿ ಯೋಗೇಶ್ವರ್ ಪ್ರಧಾನಿ ಬಳಿ ನಿಯೋಗ ಕರೆದೊಯ್ಯಲಿ- ಸಂಸದ ಡಿಕೆ ಸುರೇಶ್.

ಮೇಕೆದಾಟು ಯೋಜನೆಗಾಗಿ ಸಿ.ಪಿ ಯೋಗೇಶ್ವರ್ ಪ್ರಧಾನಿ ಬಳಿ ನಿಯೋಗ ಕರೆದೊಯ್ಯಲಿ- ಸಂಸದ ಡಿಕೆ ಸುರೇಶ್.

ಬಿಡದಿ.ಜನವರಿ,6,2022(www.justkannada.in): ಮೇಕೆದಾಟು ಯೋಜನೆಗಾಗಿ ಸಿ.ಪಿ ಯೋಗೇಶ್ವರ್ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲಿ  ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸಲಹೆ ನೀಡಿದರು.

ಬಿಡದಿಯಲ್ಲಿ ಇಂದು ಮಾತನಾಡಿದ ಡಿ.ಕೆ ಸುರೇಶ್, ಪಾದಯಾತ್ರೆಗೆ ಸಿದ್ಧತೆ ನಾವು ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಕೊರೊನಾ ಇದೆ. ಬಿಜೆಪಿ ಕರ್ಫ್ಯೂ ಬಿಜೆಪಿ ಲಾಕ್ ಡೌನ್ ಇದೆ. ಜನರಿಗೆ ಕುಡಿಯುವ ನೀರು ಸಿಗಬೇಕು. ಕುಡಿಯುವ ನೀರಿಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಅಧಿಕಾರಕ್ಕೆ ಬರಲಿ ಅಂತಾ ನಾವು ಪಾದಯಾತ್ರೆ ಮಾಡುತ್ತಿಲ್ಲ ಎಂದರು.free rice - BPL card -holders - - Center- MP- DK Suresh

ಕೇಂಧ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಸಿ.ಪಿ ಯೋಗೇಶ್ವರ್  ಪ್ರಧಾನಿ ಮೋದಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿ. ನಾವು ಬೆಂಬಲಿಸುತ್ತೇವೆ ಎಂದರು.

Key words: CP Yogeshwar – delegation – Prime Minister – mekedatu project-MP- DK Suresh