Wednesday, July 29, 2026

BDA Apartments

Home Front Page ಮುಂದೆ ನಮಗೆ ಅವಕಾಶ ಕೊಡಿ: ಟ್ರಾಫಿಕ್, ಮೂಲಸೌಕರ್ಯ ಸಮಸ್ಯೆ ಬಗೆಹರಿಸುತ್ತೇವೆ- ಡಿ.ಕೆ ಶಿವಕುಮಾರ್ ಮನವಿ.

ಮುಂದೆ ನಮಗೆ ಅವಕಾಶ ಕೊಡಿ: ಟ್ರಾಫಿಕ್, ಮೂಲಸೌಕರ್ಯ ಸಮಸ್ಯೆ ಬಗೆಹರಿಸುತ್ತೇವೆ- ಡಿ.ಕೆ ಶಿವಕುಮಾರ್ ಮನವಿ.

ಬೆಂಗಳೂರು,ಸೆಪ್ಟಂಬರ್,8,2022(www.justkannada.in):  ಮುಂದಿನ ಚುನಾವಣೆಯಲ್ಲಿ ನಮಗೆ ಅವಕಾಶ ಕೊಡಿ. ಬೆಂಗಳೂರಿನಲ್ಲಿ ಉದ್ಭವಿಸಿರುವ ಟ್ರಾಫಿಕ್, ಮೂಲಸೌಕರ್ಯಗಳ ಸಮಸ್ಯೆಯನ್ನ ಬಗೆಹರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.

ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಬಡಾವಣೆಗಳು ಜಲಾವೃತವಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ ಶಿವಕುಮಾರ್, ನಮ್ಮ ಸರ್ಕಾರ ಇದ್ದಾಗ ಮಳೆ ಬಂದಿತ್ತು. ಆ ವೇಳೆ ನಾವು ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸಿದ್ದೇವೆ. ಬೆಂಗಳೂರು ಸಂಕಷ್ಟದಲ್ಲಿರುವಾಗ ಬಿಜೆಪಿಯವರು ಜನ ಸ್ಪಂದನ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಒಳ್ಳೆಯದಾಗಲಿ ಎಂದು ಟೀಕಿಸಿದರು.

ಬೆಂಗಳೂರು ನಗರದ ಬೆಲೆ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಬೆಂಗಳೂರಿನ ಬಗ್ಗೆ ಅವರಿಗೆ ಸ್ವಲ್ಪವೂ ಕಾಳಜಿ ಇಲ್ಲ. ಸರ್ಕಾರಕ್ಕೆ ಶೇ.30 ರಷ್ಟು ತೆರಿಗೆ ಬೆಂಗಳೂರು ಕೊಡುತ್ತಿದೆ.  ಬೆಂಗಳೂರು ಜನತೆಗೆ ಮನವಿ ಮಾಡುತ್ತೇನೆ.  ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿದ್ದೇನೆ .  ನಮಗೆ ಮುಂದಿನ ಚುನಾವಣೆಯಲ್ಲಿ ಒಂದು ಅವಕಾಶ ಕೊಡಿ ಟ್ರಾಫಿಕ್ ಮತ್ತು ಮೂಲಸೌಕರ್ಯ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

Key words: We – solve – traffic-infrastructure- problem- DK Shivakumar -appeals.