Thursday, August 6, 2026

BDA Apartments

Home Front Page ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಎಂಎಲ್ ಸಿ ಹೆಚ್.ವಿಶ್ವನಾಥ್.

ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಎಂಎಲ್ ಸಿ ಹೆಚ್.ವಿಶ್ವನಾಥ್.

ಮೈಸೂರು,ಡಿಸೆಂಬರ್,13,2021(www.justkannada.in):  ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ  ಸಿದ್ದರಾಮಯ್ಯ ವಿರುದ್ಧ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ನೀನು ಅಥವಾ ನಿಮ್ಮ ಮನೆಯವರು ಯಾರಾದರೂ ಜೈಲಿಗೆ ಹೋಗಿದ್ದಾರಾ.? ಸಿದ್ದರಾಮಯ್ಯ ಅದು ಯಾವ ಹೋರಾಟ ಮಾಡಿದ್ದಾನೋ ಗೊತ್ತಿಲ್ಲ. ಕನ್ನಡ ಚಳುವಳಿಗೆ ಬಂದಿದ್ದನಾ.? ಬರೀ ಬೊಗಳೆ ಬಿಟ್ಟುಕೊಂಡು ತಿರುಗ್ತಾನೆ ಅಷ್ಟೇ ಎಂದು ಏಕವಚನದಲ್ಲೇ ಗುಡುಗಿದರು.

ಹಿಂದುಳಿದವರು ಬಿಜೆಪಿಗೆ ಹೋಗಬಾರದು ಎಂಬ ಸಿದ್ದರಾಮಯ್ಯ ಹೇಳಿಕೆಗೂ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಹೂ ಆರ್ ಯೂ.? ಹೂ ಇಸ್ ಹೀ.? ಯಾರು ಸಿದ್ದರಾಮಯ್ಯ.? ಎಲ್ಲರನ್ನೂ ಕೊಂಡು ಕೊಂಡಿದ್ದಾರಾ.? ಇವರು ಯಾರು ಅದನ್ನು ಹೇಳೋಕೆ. ಇವರಿಂದ ಹೆಚ್ ಎಂ ರೇವಣ್ಣ, ಚಿಮ್ಮನಕಟ್ಟಿ ನಮ್ಮ ಮನೆ ಹಾಳಾಗಿದೆ. ಮನೆ ಹಾಳು ಮಾಡಿದ್ದು ಬಿಟ್ಟರೆ ಬೇರೆ ಏನು ಮಾಡಿದ್ದೀರಾ.? 5 ವರ್ಷ ಸಿಎಂ ಆಗಿದ್ದಾಗ ಯಾರಿಗೆ ಏನು ಮಾಡಲಿಲ್ಲ. ಕುರುಬರಿಗೂ ಏನು ಮಾಡಲಿಲ್ಲ. ಚಾಮುಂಡೇಶ್ವರಿ ಸೋಲಿಗೆ ಎಲ್ಲರ ಮೇಲೆ ಎಗರಾಡುತ್ತಾರೆ. ನಿಮ್ಮ ಅಹಂ ನಿಮ್ಮ ದುರಂಹಕಾರ ನಿಮ್ಮನ್ನು ಸೋಲಿಸಿದ್ದು. ಬೇರೆ ಯಾರು ನಿಮ್ಮನ್ನು ಸೋಲಿಸಿಲ್ಲ ಎಂದು ಕಿಡಿಕಾರಿದರು.

Key words: MLC- H. Vishwanath – singular -against -former CM -Siddaramaiah.