Friday, August 14, 2026

BDA Apartments

Home Front Page ಪೊಲೀಸರ ಬಗ್ಗೆ ಅವಹೇಳನಕಾರಿ ಪದ ಬಳಕೆ ವಿಚಾರ: ಗೃಹಸಚಿವರ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಕೆ.ಎಸ್ ಈಶ್ವರಪ್ಪ.

ಪೊಲೀಸರ ಬಗ್ಗೆ ಅವಹೇಳನಕಾರಿ ಪದ ಬಳಕೆ ವಿಚಾರ: ಗೃಹಸಚಿವರ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಡಿಸೆಂಬರ್,5,2021(www.justkannada.in): ಪೊಲೀಸರ ಬಗ್ಗೆ ಅವಹೇಳನಕಾರಿ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನ ಸಚಿವ ಕೆ.ಎಸ್ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿರುವ ಸಚಿವ ಕೆ.ಎಸ್ ಈಶ್ವರಪ್ಪ, ಗೋವುಗಳನ್ನು ರಕ್ಷಿಸಲು ಹೊರಟಿದ್ದ ಇಬ್ಬರು ಯುವಕರನ್ನು ನೋಡಿದರೆ, ಸಂಕಟವಾಗುತ್ತೆ. ಅವರ ತಾಯಿಗೆ ಈ ಪರಿಸ್ಥಿತಿ ಉಂಟಾಗಿದ್ದರೆ. ಆ ಪದಗಳು ನನ್ನ ಬಾಯಲ್ಲಿ ಬರಬೇಕಿತ್ತು. ಆದರೆ, ಅವರು ಯಾಕೆ ಆ ಪದಗಳು ಬಳಸಿದರೋ ಗೊತ್ತಿಲ್ಲ. ನಾನು ಗೃಹ ಸಚಿವರ ಪರವಾಗಿ ಇರುತ್ತೇನೆ ಎಂದಿದ್ದಾರೆ.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಅಜ್ಞಾನಿ. ನನ್ನ ಇಲಾಖೆಯ ಸಾಧನೆ ಕುರಿತು ಪ್ರಶ್ನೆ ಹಾಕಿದ್ದಾರೆ. ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಮನೆ ಕೊಡುವುದು ವಸತಿ ಇಲಾಖೆ. ನನ್ನ ಇಲಾಖೆಯಲ್ಲಿ ಮನೆ ಹಂಚಲು, ಕಟ್ಟಲು ಬರುವುದಿಲ್ಲ. ನನ್ನನ್ನು ಟೀಕಿಸದಿದ್ದರೆ ಅವರಿಗೆ ತಿಂದಿದ್ದು ಕರಗುವುದಿಲ್ಲ ಎಂದಿದ್ದಾರೆ.

Key words:  police-Minister- KS Eshwarappa- defended -Home Minister’s- statement.