Sunday, August 2, 2026

BDA Apartments

Home Front Page ಚಳಿಗಾಲದ ಅಧಿವೇಶನ: ಕಲಾಪದಲ್ಲಿ ಕಡ್ಡಾಯ ಹಾಜರಾತಿಗೆ ಕಾಂಗ್ರೆಸ್ ನಾಯಕರಿಗೆ ವಿಪ್ ಜಾರಿ.

ಚಳಿಗಾಲದ ಅಧಿವೇಶನ: ಕಲಾಪದಲ್ಲಿ ಕಡ್ಡಾಯ ಹಾಜರಾತಿಗೆ ಕಾಂಗ್ರೆಸ್ ನಾಯಕರಿಗೆ ವಿಪ್ ಜಾರಿ.

ಬೆಳಗಾವಿ,ಡಿಸೆಂಬರ್,17,2021(www.justkannada.in): ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ನಡುವೆ ಕಲಾಪದಲ್ಲಿ ಕಡ್ಡಾಯ ಹಾಜರಿರುವಂತೆ  ಕಾಂಗ್ರೆಸ್ ನಾಯಕರಿಗೆ ವಿಪ್ ಜಾರಿ ಮಾಡಲಾಗಿದೆ.

ಮುಖ್ಯ ಸಚೇತಕ ಅಜಯ್ ಸಿಂಗ್ ಅವರು ಕಾಂಗ್ರೆಸ್ ನಾಯಕರಿಗೆ ವಿಪ್ ಜಾರಿ ಮಾಡಿದ್ದು,  ಕಾಂಗ್ರೆಸ್ ಸದಸ್ಯರು ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಿದ್ದಾರೆ.  ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಮಧ್ಯೆ ಆಡಳಿತ ಪಕ್ಷ  ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡುವ ಸಾಧ್ಯತೆ ಇದೆ. ಇನ್ನು ಅಧಿವೇಶನದ ಮೊದಲ ದಿನ ಹಲವು ಶಾಸಕರ ಗೈರು ಹಾಜರಿ ಕಂಡು ಬಂದಿತ್ತು.

Key words: Winter session-Congress leaders- whip -compulsory attendance