Friday, August 14, 2026

BDA Apartments

Home Cinema ಕಟೀಲು ದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವದಲ್ಲಿ ಶಿಲ್ಪಾ ಶೆಟ್ಟಿ

ಕಟೀಲು ದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವದಲ್ಲಿ ಶಿಲ್ಪಾ ಶೆಟ್ಟಿ

ಮಂಗಳೂರು, ಫೆಬ್ರವರಿ 01, 2019 (www.justkannada.in): ಸಹೋದರಿ ಶಮಿತಾ ಶೆಟ್ಟಿ ಮತ್ತು ಕುಟುಂಬದರೊಂದಿಗೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ ನೀಡಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಯಾವ ದೇವತೆಯನ್ನು ಆರಾಧನೆ ಮಾಡ್ತಾರೆ ಅನ್ನೋದು ಗೊತ್ತಾ? ನಟಿ ಶಿಲ್ಪಾ ಶೆಟ್ಟಿ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಭಕ್ತೆಯಾಗಿದ್ದಾರೆ ಅನ್ನೋದು ಬಹಳಷ್ಟು ಅಭಿಮಾನಿಗಳಿಗೆ ತಿಳಿದಿಲ್ಲ.

ದುರ್ಗಾಪರಮೇಶ್ವರಿಯ ಭಕ್ತೆಯಾಗಿರುವ ನಟಿ ಶಿಲ್ಪಾ ಶೆಟ್ಟಿ, ಮಂಗಳೂರಿನ ಮೂಡಬಿದಿರೆ ತಾಲೂಕಿನಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದರ್ಶನ ಪಡೆದುಕೊಂಡರು.