Tuesday, August 18, 2026

BDA Apartments

Home Front Page ಆದಿಜಾಂಬವ ನಿಗಮದಿಂದ 16 ಮಹಿಳೆಯರಿಗೆ ಕಿರುಸಾಲ ಪತ್ರ ವಿತರಿಸಿದ ಸಚಿವ ಅಶ್ವತ್ ನಾರಾಯಣ್.

ಆದಿಜಾಂಬವ ನಿಗಮದಿಂದ 16 ಮಹಿಳೆಯರಿಗೆ ಕಿರುಸಾಲ ಪತ್ರ ವಿತರಿಸಿದ ಸಚಿವ ಅಶ್ವತ್ ನಾರಾಯಣ್.

ಬೆಂಗಳೂರು,ಜನವರಿ,22,2022(www.justkannada.in): ಕರ್ನಾಟಕ ಆದಿಜಾಂಬವ ನಿಗಮದ ವತಿಯಿಂದ ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯ 16 ಮಹಿಳೆಯರಿಗೆ ತಲಾ 50 ಸಾವಿರ ರೂ.ಗಳ ಕಿರುಸಾಲ ಪತ್ರಗಳನ್ನು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಅವರು ಶನಿವಾರ ವಿತರಿಸಿದರು.

ತಮ್ಮ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಇದನ್ನು ನೆರವೇರಿಸಿದ ಅವರು, ಈ ಸಾಲವು ಶೇಕಡ 50ರಷ್ಟು ಸಬ್ಸಿಡಿಯನ್ನು ಒಳಗೊಂಡಿರುತ್ತದೆ. ಆದಿಜಾಂಬವ ಸಮುದಾಯದ ಸದಸ್ಯರು ಇದನ್ನು ತಮ್ಮ ಚಿಕ್ಕಪುಟ್ಟ ವ್ಯಾಪಾರ ವಹಿವಾಟಿಗೆ ಬಳಸಿಕೊಂಡು, ಸ್ವಾವಲಂಬಿಗಳಾಗಬೇಕು ಎಂದರು.

ಜೊತೆಗೆ ಇದೇ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತ್ತೀಕೆರೆ ವಾರ್ಡಿನ ಗೋಕುಲ ಬಡಾವಣೆಯಲ್ಲಿರುವ ಶ್ರೀ ನಂಜುಂಡೇಶ್ವರ ಮಹಿಳಾ ಸ್ವಸಹಾಯ ಸಂಘಕ್ಕೆ ಇದೇ ನಿಗಮದಿಂದ ಒಟ್ಟು 2.50 ಲಕ್ಷ ರೂ.ಗಳ ಸಾಲ ನೀಡಲಾಯಿತು. ಇದರಲ್ಲಿ ಒಂದು ಲಕ್ಷ ರೂಪಾಯಿ ಸಬ್ಸಿಡಿ ಸೇರಿದೆ.

Key words: Minister-Aswath Narayan -distributes – Loan letter- 16 women