ಮೋದಿ ಅವಕಾಶ ಕೊಟ್ರೆ ನಾನು ಪಾಕ್ ಮೇಲೆ ಯುದ್ದ ಮಾಡೋಕೆ ಸಿದ್ಧ- ಸಚಿವ ಜಮೀರ್ ಅಹ್ಮದ್ ಖಾನ್

ಬೆಂಗಳೂರು,ಮೇ,3,2025 (www.justkannada.in):  ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲಿ. ನಾನು ಪಾಕ್ ಮೇಲೆ ಯುದ್ದ ಮಾಡೋಕೆ ಸಿದ್ದ ಎಂದು ವಸತಿ ಸಚಿವ ಅಹ್ಮದ್ ಖಾನ್ ಆಕ್ರೋಶದ ಮಾತುಗಳನ್ನಾಡಿದ್ದಾರೆ.

ಹೊಸಪೇಟೆಯಲ್ಲಿ ಇಂದು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ನಾನು ಪಾಕ್ ಮೇಲೆ ಯುದ್ದ ಮಾಡೋಕೆ ಸಿದ್ದ ಕೇಂದ್ರ ಪಾಕ್  ಮೇಲೆ ಯುದ್ದ ಘೋಷಿಸಲಿ.  ಅಲ್ಲಾ ಮೇಲಾಣೆ ಪಾಕ್ ಮೇಲೆ ನಾನು ಯುದ್ದಕ್ಕೆ ಹೋಗುತ್ತೇನೆ ಎಂದು ಎದೆ ತಟ್ಟಿಕೊಂಡು ಹೇಳಿದರು.

ಆ ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರುದೇಶನೇ. ಪಾಕಿಸ್ತಾನಕ್ಕೂ ನಮಗೂ ಸಂಬಂಧವಿಲ್ಲ. ಮೋದಿ ಅವಕಾಶ ಕೊಟ್ಟರೇ ಯುದ್ದ ಮಾಡುತ್ತೇನೆ ಎಂದು ಜಮೀರ್ ಹೇಳಿದ್ದಾರೆ.

Key words: ready, war, Against, Pakistan, Minister, Zameer Ahmed Khan