ಅಪ್ಪು ಫ್ಯಾನ್ಸ್’ಗೆ ಗುಡ್ ನ್ಯೂಸ್! ಏಪ್ರಿಲ್ 1ಕ್ಕೆ ‘ಯುವರತ್ನ’ ರಿಲೀಸ್

ಬೆಂಗಳೂರು, ಜನವರಿ 02, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಗ್ರ್ಯಾಂಡ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ.

ಹೌದು. ಏಪ್ರಿಲ್ 1ಕ್ಕೆ ‘ಯುವರತ್ನ’ ರಿಲೀಸ್ ಆಗಲಿದೆ. ಈ ವಿಷಯವನ್ನು ಸ್ವತಃ ಅಪ್ಪು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ವರ್ಷದ ದಿನದಂದು ಅಪ್ಪು ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದ್ದಾರೆ. ಬಿಗ್ ಸ್ಟಾರ್ ಹಾಗೂ ಬಿಗ್ ಬಜೆಟ್ ಸಿನಿಮಾ ಅನ್ನೋ ಕೀರ್ತಿಗೆ ಯುವರತ್ನ ಪಾತ್ರವಾಗಿದೆ.