ನನ್ನ ಮಗಳು ಸಾಕಷ್ಟು‌ ಹಿಂಸೆ ಅನುಭವಿಸಿದ್ದಾಳೆ: ಕಾನೂನು ಸಮರ ಎದುರಿಸುತ್ತೇವೆ- ನಟ ಯುವ ಮಾವ ಭೈರಪ್ಪ ಮಾತು

ಮೈಸೂರು,ಜೂನ್,10,2024 (www.justkannada.in): ದೊಡ್ಮನೆ ಹುಡುಗ, ಅಣ್ಣಾವ್ರ ಮನೆಯ ಕುಡಿ ಯುವರಾಜ ಕುಮಾರ್ ತನ್ನ ಪತ್ನಿ ಶ್ರೀದೇವಿ ಅವರಿಗೆ ಡೈವರ್ಸ್ ನೀಡಲು ಮುಂದಾಗಿದ್ದು ಈಗಾಗಲೇ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಯುವ ಮಾವ ಹಾಗೂ ಶ್ರೀದೇವಿ ತಂದೆ ಭೈರಪ್ಪ, ನನ್ನ ಮಗಳು ಹಾಗೂ ಯುವ ನಡುವಿನ ವೈಮನಸ್ಸು ನಮಗೆ ಮೊದಲೇ ಗೊತ್ತಿತ್ತು. ಇಬ್ಬರು ಒಟ್ಟಿಗೆ ಇರಲಿ ಅಂತ ನಮ್ಮ ಆಸೆ. ನಾವು ಕಾನೂನು ಸಮರ ಎದುರಿಸುತ್ತೇವೆ. ನನ್ನ ಮಗಳು ಸಾಕಷ್ಟು‌ ಹಿಂಸೆ ಅನುಭವಿಸಿದ್ದಾಳೆ ಎಂದು ಹೇಳಿದ್ದಾರೆ.

ನಾನು ಶಿವರಾಜ್ ಕುಮಾರ್ ಬಳಿ ಮಾತನಾಡಬೇಕು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ. ಕಳೆದ ಡಿಸೆಂಬರ್ ತಿಂಗಳಲ್ಲಿ ನನಗೆ ನೋಟಿಸ್ ಕಳಿಸಿದರು. ಬಳಿಕ ಯುವ ಬಂದು ಮಾತನಾಡಿದರು. ನನ್ನ ಮಗಳು ವಿದೇಶದಿಂದ ಬರಬೇಕು. ಅದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭೈರಪ್ಪ ತಿಳಿಸಿದ್ದಾರೆ.

ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ವರ್ಷದ ಹಿಂದೆ ಅಮೇರಿಕಾಗೆ ಹೋಗಿದ್ದರು. ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ಕಳುಹಿಸಿದ್ದು ಯುವ. ಇಬ್ಬರು ಸಹ ಮದುವೆ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಬಳಿಕ ನನ್ನ ಮಗಳು ಸಾಕಷ್ಟು‌ ಹಿಂಸೆ ಅನುಭವಿಸಿದ್ದಾಳೆ. ವರ್ಷದ ಹಿಂದೆ ಬಂದ ಬಳಿಕವೂ ಆಕೆ ರಾಘಣ್ಣನ ಮನೆಗೆ ಹೋಗಿದ್ದಳು. ಯುವನ ಜೊತೆ ಮದುವೆ ಮಾಡಿದ್ದೇ ನಾವು. ನಮಗೆ ಅವರಿಬ್ಬರು ಚೆನ್ನಾಗಿರಬೇಕು ಅಂತ ಆಸೆ. ಡಾ.ರಾಜಕುಮಾರ್ ಅಕಾಡೆಮಿ ಆರಂಭಿಸಿದ್ದು ನನ್ನ ಮಗಳು. ಅಂದಿನಿಂದ ಅವರಿಬ್ಬರ ನಡುವೆ ಸ್ನೇಹವಿತ್ತು. ನಾವು ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡಲ್ಲ ಎಂದು ಭೈರಪ್ಪ ಸ್ಪಷ್ಟಪಡಿಸಿದ್ದಾರೆ.

Key words: Yuvaraj kumar, Wife, Shridevi, Bhairappa