Wednesday, August 12, 2026

BDA Apartments

Home Cinema ಅಪ್ಪು ನಟಿಸಬೇಕಿದ್ದ ಸಂತೋಷ್ ಆನಂದ್ ರಾಮ್ ಚಿತ್ರದಲ್ಲಿ ಯುವರಾಜ ಕುಮಾರ್ ?

ಅಪ್ಪು ನಟಿಸಬೇಕಿದ್ದ ಸಂತೋಷ್ ಆನಂದ್ ರಾಮ್ ಚಿತ್ರದಲ್ಲಿ ಯುವರಾಜ ಕುಮಾರ್ ?

ಬೆಂಗಳೂರು, ಡಿಸೆಂಬರ್ 14, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾಡಬೇಕಿದ್ದ ಸಿನಿಮಾಗೆ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ ಕುಮಾರ್ ಹೀರೋ ಆಗಲಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಷ್ಟೋ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ ಅದೆಲ್ಲವೂ ಈಗ ಅರ್ಧಕ್ಕೇ ನಿಂತಿವೆ. ಆದರೀಗ ಅಪ್ಪು ಮಾಡಬೇಕಿದ್ದ ಸಿನಿಮಾವೊಂದಕ್ಕೆ ಯುವರಾಜ್ ಕುಮಾರ್ ನಾಯಕರಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಸಂತೋಷ್ ಆನಂದ್ ರಾಮ್ ಅವರು ಪುನೀತ್ ಗಾಗಿ ಮಾಡಿದ್ದ ಸ್ಕ್ರಿಪ್ಟ್ ನಲ್ಲಿ ಯುವರಾಜ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಬರಬೇಕಿದೆ.